ನಾನು ಬಯಸಿದ ಪ್ರೀತಿ ಸಿಕ್ಕಿತು ಎಂದ ರಶ್ಮಿಕಾ ಮಂದಣ್ಣ!
ಅವರ ಮುದ್ದಿನ ನಾಯಿ ಔರಾ. 10 ದಿನಗಳ ಕಾಲ ಶೂಟಿಂಗ್ ನಿಮಿತ್ತ ಮನೆಯಿಂದ ಹೊರಹೋಗಿದ್ದ ರಶ್ಮಿಕಾ ವಾಪಸ್ ಬಂದಾಗ ಔರಾ ಅವರ ಮೇಲೆರಗಿ ತನ್ನ ಪ್ರೀತಿಯನ್ನು ತೋರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದುವರೆಗೆ ನಾನು ಔರಾನನ್ನು ಇಷ್ಟು ದಿನ ಬಿಟ್ಟಿರಲಿಲ್ಲ. ಈ ರೀತಿಯ ಪ್ರೀತಿಯೇ ನನಗೆ ಬೇಕಾಗಿದ್ದು, ಅದೀಗ ಸಿಕ್ಕಿದೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.