ರಕ್ಷಿತ್, ರಿಷಬ್ ನೆನೆದ ರಶ್ಮಿಕಾ ಮಂದಣ್ಣ
ರಕ್ಷಿತ್ ಶೆಟ್ಟಿ ಜೊತೆ ವಿವಾಹ ನಿಶ್ಚಿತಾರ್ಥ ಬ್ರೇಕಪ್ ಆದ ಬಳಿಕ ರಶ್ಮಿಕಾ ಟ್ರೋಲ್ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಟಾಲಿವುಡ್, ಬಾಲಿವುಡ್ ನಲ್ಲಿ ಬ್ಯುಸಿಯಾದ ಮೇಲೆ ಪದೇ ಪದೇ ಕನ್ನಡದ ಬಗ್ಗೆ ಅವಗಣನೆ ಮಾಡಿ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಟ್ರೋಲ್ ಆಗುತ್ತಿದ್ದರು. ಆದರೆ ಇತ್ತೀಚೆಗೆ ರಶ್ಮಿಕಾ ಕನ್ನಡದ ಮೇಲೆ ಆಗಾಗ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಸಿನಿಮಾ ಬಗ್ಗೆ ಕೇಳಿದಾಗ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ನನಗೆ ಸಿನಿಮಾ ದಾರಿ ತೋರಿಸಿದರು. ಪುನೀತ್ ರಾಜ್ ಕುಮಾರ್ ಜೊತೆ ಅಂಜನಿ ಪುತ್ರ ಸಿನಿಮಾ ಮಾಡುವಾಗ ಅವರು ಹೇಗೆ ವಿಶಾಲ ಮನೋಭಾವದವರಾಗಿ ಇರಬೇಕು ಎಂದು ಹೇಳಿಕೊಟ್ಟರು ಎಂದು ಕನ್ನಡ ಸ್ಟಾರ್ ಗಳನ್ನು ಸ್ಮರಿಸಿಕೊಂಡಿದ್ದಾರೆ.