ಕೊನೆಗೂ ತಮಿಳು ಫ್ಯಾನ್ಸ್ ಆಸೆ ನೆರವೇರಿಸಿಯೇ ಬಿಟ್ರು ರಶ್ಮಿಕಾ ಮಂದಣ್ಣ

ಗುರುವಾರ, 10 ಮಾರ್ಚ್ 2022 (09:20 IST)
ಚೆನ್ನೈ: ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ಬೆಡಗಿ ರಶ್ಮಿಕಾ ಮಂದಣ್ಣ ತಮಿಳಿನಲ್ಲಿ ವಿಜಯ್ ಜೊತೆ ಸಿನಿಮಾ ಮಾಡಬೇಕೆಂಬುದು ಕೇವಲ ಅವರ ಮಾತ್ರವಲ್ಲ, ಅಭಿಮಾನಿಗಳದ್ದೂ ಕನಸಾಗಿತ್ತು. ಆ ಕನಸೀಗ ನನಸಾಗುತ್ತಿದೆ.

ಈ ಮೊದಲು ಸಾಮಾಜಿಕ ಜಾಲತಾಣದಲ್ಲಿ ಹಲವರು ರಶ್ಮಿಕಾಗೆ ನೀವು ಯಾವಾಗ ವಿಜಯ್ ಜೊತೆ ನಟಿಸುವುದು ಎಂದು ಪ್ರಶ್ನಿಸುತ್ತಲೇ ಇದ್ದರು. ಅದಕ್ಕೆ ತಕ್ಕಂತೆ ರಶ್ಮಿಕಾ ಕೂಡಾ ವಿಜಯ್ ಜೊತೆ ಅಭಿನಯಿಸುವ ಆಸೆ ವ್ಯಕ್ತಪಡಿಸಿದ್ದರು.

ಇದೀಗ ಆ ಕನಸು ನನಸಾಗುತ್ತಿದೆ. ಬೀಸ್ಟ್ ಸಿನಿಮಾ ಬಳಿಕ ವಿಜಯ್ ನಟಿಸಲಿರುವ ಹೊಸ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೊದಲು ರಶ್ಮಿಕಾ ನಟ ಕಾರ್ತಿ ಜೊತೆ ತಮಿಳಿನಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಅಷ್ಟೊಂದು ಸದ್ದು ಮಾಡಿರಲಿಲ್ಲ. ಈಗ ವಿಜಯ್ ಜೊತೆ ನಟಿಸುವುದು ಬಹುತೇಕ ಪಕ್ಕಾ ಆಗಿದೆ. ಅಧಿಕೃತ ಪ್ರಕಟಣೆಯೊಂದೇ ಬಾಕಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ