ನಟರಾಜ್ ಹಳೆಬೀಡು, ಸಂದೀಪ್ ಕುಮಾರ್, ಡಾ. ನವೀನ್ ನಿರ್ಮಾಣದ ಈ ಚಿತ್ರ ಕನ್ನಡದ ಮಟ್ಟಿಗೆ ಅತ್ಯಂತ ಹೊಸತಾದ, ಎಂಥವರೂ ಬೆರಗಾಗುವಂಥಾ ಚೆಂದದ ಕಥಾ ಹಂದರವಿದೆ. ತಾಂತ್ರಿಕವಾಗಿಯೂ ಹಾಲಿವುಡ್ ಗ್ಫಿಮತ್ರಿಕ ಶ್ರೀಮಂತಿಕೆ ಹೊಂದಿರೋ ರತ್ನಮಂಜರಿಯ ವಿಶೇಷತೆಗಳನ್ನು ಒಂದೇ ಸಲಕ್ಕೆ ಪಟ್ಟಿ ಮಾಡೋದು ಕಷ್ಟದ ಸಂಗತಿ. ಆದರೆ ಚಿತ್ರೀಕರಣದ ಹಂತದಲ್ಲಿಯೇ ಹಲವಾರು ವಿಚಾರಗಳು ಚಿತ್ರತಂಡವನ್ನು ಕಾಡಿವೆ. ಅದೆಲ್ಲದರಾಚೆಗೂ ಕೊಡಗಿನ ಪ್ರಕೃತಿಯನ್ನು ಮಜವಾಗಿ ಸೆರೆ ಹಿಡಿದಿರೋದೂ ಕೂಡಾ ಈ ಸಿನಿಮಾ ವಿಶೇಷತೆಗಳಲ್ಲೊಂದು.
ಹೀಗೆ ಧ್ಯಾನದಂತೆ ಕೊಡಗಿನಲ್ಲಿ ಚಿತ್ರೀಕರಣ ನಡೆಸಿದ್ದ ಚಿತ್ರತಂಡ ಬೆಂಗಳೂರಿಗೆ ವಾಪಾಸಾದ ಎರಡ್ಮೂರು ದಿನಗಳಲ್ಲಿಯೇ ಮಹಾ ಪ್ರಾಕೃತಿಕ ದುರಂತ ಸಂಭವಿಸಿತ್ತು. ರತ್ನಮಂಜರಿಗೆ ಚಿತ್ರೀಕರಣ ನಡೆಸಿದ್ದ ಸ್ಥಳಗಳೆಲ್ಲವೂ ಭೂಕುಸಿತಕ್ಕೆ ಬಲಿಯಾಗಿದ್ದವು. ಇದು ಚಿತ್ರತಂಡಕ್ಕೆ ಎದುರಾಗಿದ್ದ ಮಹಾ ಆಘಾತ. ಆದರೆ ಕೊಡಗನ್ನು ಸಹಜ ಸ್ಥಿತಿಯಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಈ ಚಿತ್ರದ ಮೂಲಕವೇ ಸಿಗಲಿದೆ.