ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದ ರವಿ ಮುರೂರು

ಸೋಮವಾರ, 23 ನವೆಂಬರ್ 2015 (11:05 IST)
ನಾಲ್ಕನೇ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಬೀಳುತ್ತಾರೆ ಅನ್ನೋದು ಕಳೆದ ಒಂದು ವಾರದಿಂದ ಭಾರೀ ಕುತೂಹಲ ಉಂಟು ಮಾಡಿತ್ತು. ನೇಹಾ, ಚಂದನ್, ನೇತ್ರಾ, ರವಿ ಮುರೂರು ಈ ನಾಲ್ಕು ಜನ ಹೆಸರುಗಳು ಎಲಿಮಿನೇಟ್ ಲಿಸ್ಟ್‌ನಲ್ಲಿ ಇದ್ದುದರಿಂದ ಯಾರು ಹೊರ ಬರುತ್ತಾರೆ ಅನ್ನೋದು ಕುತೂಹಲ ಮೂಡಿಸಿತ್ತು. ಆದ್ರೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರವಿ ಮುರೂರು ಮನೆಯಿಂದ ಹೊರ ಬಿದ್ದಿದ್ದಾರೆ.

ಅಂದ್ಹಾಗೆ ಒಂದು ಲೆಕ್ಕಾಚಾರದ ಪ್ರಕಾರ  ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಹುಚ್ಚ ವೆಂಕಟ್ ಅವರು ರೌದ್ರಾವತಾರ ತಾಳದೇ ಇದ್ದಿದ್ದರೆ ರವಿ ಮುರೂರು ಕಳೆದ ವಾರವೇ ನಾಮಿನೇಟ್ ಆಗುತ್ತಿದ್ದರು. ಆದ್ರೆ ಬಿಗ್ ಬಾಸ್ ನಿಯಮದ ಪ್ರಕಾರ ಒಂದು ವಾರಕ್ಕೆ ಒಬ್ಬ ಸ್ಪರ್ಧಿ ಎಲಿಮ್ನೇಟ್ ಆಗಲು ಅವಕಾಶವಿದ್ದು ಹಾಗಾಗಿ ರವಿ ಬಚಾವ್ ಆಗಿದ್ದರು. ಆದ್ರೆ ಈ ವಾರ ನೇಹಾ, ಭಾವನಾ, ಪೂಜಾ, ಅಯ್ಯಪ್ಪ ಮುಂತಾದವರು ರವಿ ಅವರನ್ನು ಎಲಿಮ್ನೇಟ್ ಮಾಡಿದ್ದಿರಿಂದ  ಬಿಗ್ ಬಾಸ್ ಮನೆಯ ಹಾಡುವ ಹಕ್ಕಿ ರವಿ ಮನೆಯಿಂದ ಹೊರ ಬಿದ್ದಿದ್ದಾರೆ.
 
ಅಚ್ಚರಿಯ ಸಂಗತಿ ಅಂದ್ರೆ ಹುಚ್ಚ ವೆಂಕಟ್ ರವಿ ಮೇಲೆ ಹಲ್ಲೆ ನಡೆಸಿದ್ದರ ಬಗ್ಗೆ ಸುದೀಪ್ ರವಿ ಬಳಿ ಕೇಳಿದ್ದಾಗ ಅವರು ಮಾತ್ರ ಹುಚ್ಚ ವೆಂಕಟ್ ವಿರುದ್ಧ ಯಾವುದೇ ಕೋಪ ಮಾಡಿಕೊಳ್ಳಲಿಲ್ಲ. ವೆಂಕಟ್ ಒಬ್ಬ ಒಳ್ಳೆ ವ್ಯಕ್ತಿ. ಅವರ ಅಲೋಚನೆಗಳು ತುಂಬಾ ಚೆನ್ನಾಗಿವೆ ಅನ್ನೋ ಮೂಲಕ ಅಚ್ಚರಿ ಹುಟ್ಟಿಸಿದ್ರು.

ವೆಬ್ದುನಿಯಾವನ್ನು ಓದಿ