ಇಂದ್ರಜಿತ್ ನಿರ್ದೇಶನದಲ್ಲಿ ಲವ್ ಯು ಆಲಿಯ ಎನ್ನುತ್ತಿರುವ ರವಿಚಂದ್ರನ್

ಗುರುವಾರ, 30 ಅಕ್ಟೋಬರ್ 2014 (10:08 IST)
ಕನ್ನಡ ಚಿತ್ರರಂಗದಲ್ಲಿ ಹೊಸತನಗಳನ್ನು ನೀಡಿರುವ ನಿರ್ದೇಶಕರು ಒಟ್ಟಿಗೆ ಸೇರುತ್ತಿದ್ದಾರೆ. ಅಂದರೆ ಒಂದು ಚಿತ್ರದಲ್ಲಿ ಈ ಜೋಡಿ ಒಟ್ಟಾಗಿ ಕೆಲಸ  ಮಾಡುತ್ತಿದ್ದಾರೆ. ಅವರು ಬೇರೆ ಯಾರು ಅಲ್ಲ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್. ಈ ಜೋಡಿಯ ಒಂದು ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದರೆ ಅರ್ಥ ಇಂದ್ರಜಿತ್ ಸಿನಿಮಾದಲ್ಲಿ ರವಿಮಾಮ ನಟಿಸುತ್ತಿದ್ದಾರೆ.

ಲವ್ ಯು  ಆಲಿಯ ಚಿತ್ರದಲ್ಲಿ ಬಹುಭಾಷಾ ತಾರೆ ಭೂಮಿಕ ಚಾವ್ಲ ಸಹಾ ನಟಿಸಲು ಸಿದ್ಧ ಆಗಿದ್ದಾರೆ. ಅನೇಕ ಕುತೂಹಲಗಳನ್ನು ಹೊಂದಿರುವ ಚಿತ್ರದಲ್ಲಿ ರವಿ ಮಾಮ ಮೊಟ್ಟ ಮೊದಲ ಬಾರಿಗೆ ಡಾಕ್ಟರ್ ಪಾತ್ರದಲ್ಲಿ ಕಂಡು ಬರುತ್ತಿದ್ದಾರೆ. ಅಲ್ಲದೆ ರವಿ ಅವರ ಜೊತೆ ನಟಿಸಲು ಭೂಮಿಕಾ ಅವರಿಗೆ ಸಿಕ್ಕಾಪಟ್ಟೆ ಖುಷಿ ಆಗಿದೆಯಂತೆ. ಅದಕ್ಕೆ ಕಾರಣ ಅವರ ಅಭಿನಯಿಸಲು ಹೊರಟಿರುವ ಈ ಚಿತ್ರದಲ್ಲಿ ಕಥೆ ತುಂಬಾ ಚೆನ್ನಾಗಿದೆಯಂತೆ. 
 
ಅದಕ್ಕೆ ಆಕೆ ಒಪ್ಪಿಕೊಂಡಳಂತೆ. ಅಷ್ಟೇ ಅಲ್ಲದೆ ರವಿಚಂದ್ರನ್ ಬಾಲಿವುಡ್ ನಟಿಯರನ್ನು ಕನ್ನಡಕ್ಕೆ ತಂದ ಧೀರ ಆದ್ದರಿಂದ ಸಹಿತ ಅವರ ಚಿತ್ರದಲ್ಲಿ ನಟಿಸುವುದಕ್ಕೆ ಆದ್ಯತೆ ನೀಡಿದಳಂತೆ , ಹಾಗಂತ ತನ್ನ ಮನದ ಭಾವ ಬಿಚ್ಚಿಟ್ಟಿದ್ದಾಳೆ ಈ ಸಪೂರ ಸುಂದರಿ. ಮೊಟ್ಟ ಮೊದಲ ಬಾರಿಯ ಈ ಜೋಡಿ ತೆರೆ ಹಂಚಿಕೊಂದಿರುವುದರಿಂದ ತಮಿಳು ಮತ್ತು ತೆಲುಗು ಚಿತ್ರರಂಗದವರ ಚಿರಪರಿಚಿತ ಚೆಲುವೆ ಭೂಮಿಕಾಳ ಹೊಸ ಚಿತ್ರದ ಬಗ್ಗೆ ಅಧಿಕ ಕುತೂಹಲ ಮೂಡಿದೆ. ಇದು ರವಿಚಂದ್ರನ್ ಮತ್ತು ಇಂದ್ರಜಿತ್ ಲಂಕೇಶ್ ಅವರ ಶ್ರಮದಿಂದ ಗೆದ್ದರೂ ಸಹಿತ ಈ ಚಿತ್ರ ಭೂಮಿಕ ಕಾಲ್ಗುಣದಿಂದ ಗೆಲುವು ಕಂಡಿತು ಎನ್ನುವ ಮಾತನ್ನು ಖಂಡಿತ ಬರೆದೇ ಬರೆಯುತ್ತಾರೆ ಟಾಲಿವುಡ್ ಮಾಧ್ಯಮಿಗಳು ಎನ್ನುವ ಕೊಂಕು ಮಾತು ಗಾಂಧಿ ನಗರವಾಸಿಗಳಿಂದ ಕೇಳಿ ಬರುತ್ತಿದೆ.. ಏನೇ ಇರಲಿ ರವಿ ಮಾಮ ಮತ್ತು ಇಂದ್ರಜಿತ್ ಒಟ್ಟಿಗೆ ಕೆಲಸ ಮಾಡುತ್ತಿರುವ ಚಿತ್ರದ ಬಗ್ಗೆ ಕನ್ನಡಿಗರಿಗೆ ಬಹಳಷ್ಟು ನಿರೀಕ್ಷೆಗಳಿವೆ ಎನ್ನುವುದಂತೂ ಸುಳ್ಳಲ್ಲ.  

ವೆಬ್ದುನಿಯಾವನ್ನು ಓದಿ