ಅಪೂರ್ವಳನ್ನು ಅಪೂರ್ವವಾಗಿ ತೋರಿಸಲು ಹೊರಟಿರುವ ರವಿಮಾಮ

ಮಂಗಳವಾರ, 27 ಜನವರಿ 2015 (10:43 IST)
ಕಳೆದ ವರ್ಷ ಸಾಕಷ್ಟು ಭಿನ್ನ ರೀತಿಯ ಪಾತ್ರಗಳಲ್ಲಿ ಕಂಡು ಬಂದ ಕನ್ನಡದ ಕನಸುಗಾರ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರು ಈಗ ತಮ್ಮ ಶೈಲಿಯ ನಿತ್ಯ ನೂತನ ಶೈಲಿಯ ಸಿನಿಮಾದಲ್ಲಿ ನಟಿಸುವ ನಿರ್ಮಿಸುವ ಕೆಲಸದಲ್ಲಿ ಮತ್ತೆ ಮಗ್ನರಾಗಲು ಸಿದ್ಧತೆ ನಡೆಸಿದ್ದಾರೆ. ಅವರ ಮುಂದಿನ ಚಿತ್ರ ಅಪೂರ್ವ. ಈ ಚಿತ್ರದ ಎಲ್ಲ ಸಂಗತಿಗಳು ಹಾಗೆನ್ನುವುದಕ್ಕಿಂತ ಈ ಕಥೆಯ ಮುಖ್ಯ ಸಂಗತಿಗಳು ನಡೆಯುವುದು ಲಿಫ್ಟ್ ನಲ್ಲಿ. ಈ ಚಿತ್ರದ ವಿಶೇಷ ಲಿಫ್ಟ್ ಎನ್ನುವುದನ್ನು ಇಲ್ಲಿ ಎಲ್ಲರು ತಿಳಿಯ ಬೇಕಾದ ಸಂಗತಿ. ಯಾಕೆಂದರೆ  ಹೂವು, ಹಣ್ಣು ,ಕಾಯಿ,  ಹೀಗೆ ಯಾವುದೇ ಪ್ರಾಪರ್ಟಿ ಸಿಗಲಿ ಅದನ್ನು ಸಮರ್ಥವಾಗಿ ಬಳಸಿ ಚಿತ್ರ ನಿರ್ಮಿಸುವಂತಹ ವಿಭಿನ್ನತೆ ಹೊಂದಿರುವ ಪ್ರತಿಭಾವಂತ ವಿ ರವಿಚಂದ್ರನ್ . ಈಗ ಅವರ ಆದ್ಯತೆ ಲಿಫ್ಟ್ ಕಡೆಗಿದೆ.  

ಈ ಚಿತ್ರದ ಬಗ್ಗೆ ರವಿ ಮಾಮ ಏನನ್ನು ಹೇಳುತ್ತಿಲ್ಲ. ಅವರ ಚಿತ್ರದ ನಾಯಕಿಯ ರೀಲ್ ಮತ್ತು ರಿಯಲ್ ಹೆಸರು ಅಪೂರ್ವ . ಸದ್ಯಕ್ಕೆ ತಾನು ಆಕೆಯನ್ನು ಜನರ ಮುಂದೆ ತರಲ್ಲ ಎನ್ನುವುದಷ್ಟೇ ಹೇಳಿರೋದು ರವಿಚಂದ್ರನ್. ಚಿತ್ರದ ಬಹುಮುಖ್ಯ ಅಂಶಗಳು   ಲಿಫ್ಟ್ ನಲ್ಲಿ ನಡೆಯುತ್ತದೆ ಎನ್ನುವುದಷ್ಟೇ ಈಗ ಎಲ್ಲರ ಚರ್ಚೆಯ ಸಂಗತಿಯಾಗಿದೆ. ಇದು ಅತ್ಯಂತ ವಿಭಿನ್ನವಾದ ಕಥಾ ಹಂದರ ಹೊಂದಿದೆ ಎನ್ನುವುದು ಸಹಿತ ಇಲ್ಲಿ ನೆನಪಿಸಿ ಕೊಳ್ಳ ಬೇಕಾಗಿದೆ. 
 

ವೆಬ್ದುನಿಯಾವನ್ನು ಓದಿ