ಶಿವಣ್ಣನ ಶೂಟಿಂಗ್ ಸ್ಪಾಟ್‌ನಲ್ಲಿ ರವಿಚಂದ್ರನ್ ಕೆಲಸ ಮಾಡಿದ್ದಾರೆ...?!

ಗುರುವಾರ, 29 ಜನವರಿ 2015 (09:48 IST)
ಸೆಂಚುರಿ ಸ್ಟಾರ್   ಡಾ.ಶಿವರಾಜ್ ಕುಮಾರ್ ಅವರು ಒಟ್ಟಿಗೆ ಒಂದು ಸಿನಿಮಾ ಸೆಟ್ ನಲ್ಲಿ ಇದ್ದರು. ಅವರು ಆ ಸೆಟ್ ನಲ್ಲಿ ಏನ್ ಮಾಡ್ತಾ ಇದ್ರೂ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುವುದಿಲ್ಲ, ಅದು ಯಾಕೇಂದ್ರೆ ಸಾಮಾನ್ಯವಾಗಿ  ಇಬ್ಬರು ಹೀರೋಗಳು ಒಂದು ಸಿನಿಮಾ ಸೆಟ್ ನಲ್ಲಿ ಇದ್ದಾರೆ ಅಂದರೆ ಅವರಿಬ್ಬರು ಒಟ್ಟಿಗೆ ಅಭಿನಯಿಸುತ್ತಿದ್ದಾರೆ ಎಂದರ್ಥ.
ಪ್ರಸ್ತುತ ಶಿವಣ್ಣ ಕೊರಿಯಾಗ್ರಾಫರ್ ಆಗಿ ಆ ಬಳಿಕ ನಿರ್ದೇಶನದತ್ತ ತಮ್ಮ ಗಮನ ಕೇಂದ್ರೀಕರಿಸಿದ ಪ್ರತಿಭಾವಂತ ಹರ್ಷ ಅವರ ವಜ್ರಕಾಯ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 2013  ರಲ್ಲಿ ಶಿವಣ್ಣ ಅಭಿನಯದ ಹರ್ಷ ನಿರ್ದೇಶನದ ಚಿತ್ರ ಭಜರಂಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ಅದಾದ ಬಳಿಕ  ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ತಮ್ಮ ಪ್ರೀತಿಯ ಶಿವಣ್ಣ ಸಾಹಸಭರಿತ ಚಿತ್ರಗಳಲ್ಲಿ ಅಭಿನಯಿಸ ಬೇಕು ಎಂದು ಬಯಸಿದರು.  
 
ಈಗ ಆ ಅಂಶದ ಅಡಿಯಲ್ಲಿ ವಜ್ರಕಾಯ ಸಿದ್ಧವಾಗುತ್ತಿದೆ. ವಜ್ರಕಾಯ ಶೂಟಿಂಗ್ ಸ್ಪಾಟ್ ಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಬಂದಿದ್ದರು. ಆ ಎರಡು ಚಂದನವನದ ಈ ಎರಡು ತಾರೆಗಳು ಹಳೆಯ ಮಿತ್ರರು.ಒಟ್ಟಿಗೆ ಸ್ವಲ್ಪ  ಕಾಲ ಹರಟಿ, ನಕ್ಕು ನಲಿದು ಆ ಬಳಿಕ ತಮ್ಮ ತಮ್ಮ ಕೆಲ್ಸಕ್ಕೆ ವಾಪಸಾದರು. ಅಷ್ಟೇ ಈಗ ನಾವು ಹೇಳ ಬೇಕಾಗಿದ್ದ ಸಂಗತಿ. ಆದರು ಒಬ್ಬರು ಸ್ಟಾರ್ಗಳು ಹೀಗೆ ಶೂಟಿಂಗ್ ಸ್ಪಾಟ್ ನಲ್ಲಿ ಬಂದು ಮಾತಾಡುವುದು ಸಹ ದೊಡ್ಡ ವಿಷಯವೇ ತಾನೇ ಮಾಧ್ಯಮಗಳಿಗೆ!
 

ವೆಬ್ದುನಿಯಾವನ್ನು ಓದಿ