ಕೆಜಿಎಫ್ 2 ವೀಕ್ಷಿಸಲಿರುವ ಆರ್ ಸಿಬಿ ಬಾಯ್ಸ್

ಮಂಗಳವಾರ, 19 ಏಪ್ರಿಲ್ 2022 (07:39 IST)
ಬೆಂಗಳೂರು: ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಕೆಟಿಗರು ಬ್ಲಾಕ್ ಬ್ಲಸ್ಟರ್ ಸಿನಿಮಾ ಕೆಜಿಎಫ್ 2 ವೀಕ್ಷಿಸಲಿದ್ದಾರೆ.

ಆರ್ ಸಿಬಿ ಮತ್ತು ಹೊಂಬಾಳೆ ಫಿಲಂಸ್ ಮೊನ್ನೆಯಷ್ಟೇ ಸಂಯೋಗ ನಡೆಸಿತ್ತು. ಇದೀಗ ಆರ್ ಸಿಬಿ ಹುಡುಗರಿಗಾಗಿ ಹೊಂಬಾಳೆ ಫಿಲಂಸ್ ಕೆಜಿಎಫ್ 2 ವಿಶೇಷ ಪ್ರದರ್ಶನ ಏರ್ಪಡಿಸಲಿದೆ. ಆರ್ ಸಿಬಿ ನಾಯಕ ಫಾ ಡು ಪ್ಲೆಸಿಸ್ ಸೇರಿದಂತೆ ಕ್ರಿಕೆಟಿಗರು ರಾಕಿ ಭಾಯಿ ರೀತಿ ಪೋಸ್ ಕೊಟ್ಟಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಾಣುತ್ತಿರುವ ಕೆಜಿಎಫ್ 2 ಈಗ ಕ್ರಿಕೆಟಿಗರನ್ನೂ ತಲುಪಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ