ರಾಕಿಭಾಯ್ ಯಶ್ ಗೆ ಹ್ಯಾಂಡ್ಸಮ್ ಆಗಿ ಕಾಣಿಸಲು ನೆರವಾಗುವವರು ಇವರೇ ನೋಡಿ!
ಅಷ್ಟಕ್ಕೂ ರಾಕಿ ಭಾಯ್ ಇಷ್ಟು ಸುಂದರವಾಗಿ ಕಾಣುವಂತೆ ಕಾಸ್ಟ್ಯೂಮ್ ಡಿಸೈನ್ ಮಾಡಿದವರು ಯಾರು ಗೊತ್ತಾ? ಸಾನಿಯಾ ಸರ್ದಾರಿಯಾ. ಈಕೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಪತ್ನಿ. ಜೊತೆಗೆ ಖ್ಯಾತ ವಸ್ತ್ರ ವಿನ್ಯಾಸಕಿ ಕೂಡಾ.
ಈಕೆ ರಾಕಿಂಗ್ ದಂಪತಿಗಳಿಗೆ ಕೆಲವು ವರ್ಷಗಳಿಂದ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೆಜಿಎಫ್ 2 ಸಿನಿಮಾದಲ್ಲೂ ಯಶ್ ವಿವಿಧ ಸೂಟ್ ಗಳಲ್ಲಿ ಕಂಗೊಳಿಸುತ್ತಾರೆ. ಈ ಎಲ್ಲಾ ಸೂಟ್ ಗಳನ್ನು ವಿನ್ಯಾಸ ಮಾಡಿದ್ದು ಇದೇ ಸಾನಿಯಾ ಸರ್ದಾರಿಯಾ.