ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾಗೆ ಜೂನ್ 3 ರಂದು ಚಾಲನೆ?

ಮಂಗಳವಾರ, 24 ಮೇ 2022 (10:35 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಬಹಳ ದಿನಗಳ ನಂತರ ನಿರ್ದೇಶನ ಮಾಡಲಿರುವ ಸಿನಿಮಾಗೆ ಜೂನ್ 3 ರಂದು ಮುಹೂರ್ತ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.

ಉಪೇಂದ್ರ ನಿರ್ದೇಶನ ಮಾಡುತ್ತಾರೆ ಎಂದರೆ ಅಭಿಮಾನಿಗಳಲ್ಲಿ ಸಹಜವಾಗಿ ಕುತೂಹಲವಿದ್ದೇ ಇರುತ್ತದೆ. ಅದಲ್ಲದೆ, ಪೋಸ್ಟರ್ ಒಂದನ್ನು ಹೊರಬಿಟ್ಟು ಎಲ್ಲರ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ.

ಈಗಾಗಲೇ ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಉಪೇಂದ್ರ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದಲ್ಲದೆ, ಕಬ್ಜ ಶೂಟಿಂಗ್ ಹಂತದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ