ಬೆಂಗಳೂರು: ರೀಲ್ಸ್ ಮೂಲಕ ಇಂದು ಅನೇಕ ಪ್ರತಿಭೆಗಳಿಗೆ ದೊಡ್ಡ ವೇದಿಕೆ ಸಿಕ್ಕಿದೆ. ಸದ್ಯ ಕನ್ನಡದಲ್ಲಿ ಟ್ರೆಂಡಿಂಗ್ ರೀಲ್ಸ್ ಮೂಲಕ ಹವಾ ಸೃಷ್ಟಿಸುತ್ತಿರುವ ರೀಲ್ಸ್ ಕ್ವೀನ್ ರೇಷ್ಮಾ ಅವರು ಸದ್ಯ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಗಿಚ್ಚಿ ಗಿಲಿ ಗಿಲಿ 3 ಸೆಟ್ನಲ್ಲಿ ಸ್ಪರ್ಧಿಗಳ ಜತೆ ರೇಷ್ಮಾ ಅವರು ಕುಳಿತುಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ರೇಷ್ಮಾಕ್ಕ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆಂದು ಶುಭ ಹಾರೈಸಿದ್ದಾರೆ.
ಈಚೆಗೆ ಆರಂಭಗೊಂಡ 'ಗಿಚ್ಚಿ ಗಿಲಿ ಗಿಲಿ' 3 ಶೋನಲ್ಲಿ ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಅವರು ಕಾಣಿಸುತ್ತಿಲ್ಲ. ಹಾಗಾಗಿ ಅವರ ಜಾಗಕ್ಕೆ ರೇಷ್ಮಾಕ್ಕ ಅವರನ್ನು ಕರೆತರಲಾಗಿದೆ ಎನ್ನಲಾಗಿದೆ.
ಇನ್ನೂ ಇನ್ಸ್ಟಾಗ್ರಾಂ ಖಾತೆಯಲ್ಲಿ ರೇಷ್ಮಾ ಅವರಿಗೆ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಸಿನಿಮಾ ಹಾಡುಗಳಿಗೆ ರೀಲ್ಸ್ ಮೂಲಕ ಮತ್ತು ಇಂಗ್ಲಿಷ್ ಪದಗಳನ್ನು ತಪ್ಪಾಗಿ ಹೇಳುವ ಮೂಲಕ ಸಖತ್ ಟ್ರೋಲ್ ಆಗಿ, ಲೈಕ್ಸ್ ಪಡೆಯುತ್ತಿದ್ದಾರೆ.
ಇನ್ನೂ ಮುಂಬರುವ ಶೋನಲ್ಲಿ ರೇಷ್ಮಾ ಅವರ ಅಭಿನಯವನ್ನು ಹೀಗಿರುತ್ತದೆ ಎಂದು ಕಾದು ನೋಡಬೇಕಿದೆ.