ಅಜ್ಜಿಯಾದ ಚಿರ ಯೌವನೆ ರೇಖಾ.. ಇದು ಸೂಪರ್ ನಾನಿ ಕಮಾಲ್

ಸೋಮವಾರ, 6 ಅಕ್ಟೋಬರ್ 2014 (12:02 IST)
ಇಂದ್ರ ಕುಮಾರ್ ಮತ್ತು ಅಶೋಕ್ ಥಾಕೆರಿಯ ಅವರ ಜೋಡಿಯ ನಿರ್ಮಾಣದಲ್ಲಿ 1980ರಲ್ಲಿ ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ ಬೇಟಾ ಚಿತ್ರ ಜನರನ್ನು ರಂಜಿಸಿತ್ತು. ಅದಾದ ಬಳಿಕ ಈ ಜೋಡಿ ಮತ್ತೊಮ್ಮೆ ಅಂದರೆ ಬಹಳ ವರ್ಷಗಳ ಬಳಿಕ ಸೂಪರ್ ನಾನಿ ಚಿತ್ರದ ಮುಖಾಂತರ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಚಿರ ಯೌವನೆ ರೇಖಾ ಅವರು ಅಜ್ಜಿಯ ಪಾತ್ರದ ಮೂಲಕ ಬಣ್ಣ ಹಚ್ಚಿ ಎಲ್ಲರ ಗಮನ ಸೆಳೆದಿದ್ದಾರೆ.

ಸೂಪರ್ ನಾನಿ ಭಾರತದ ಮಧ್ಯಮ ವರ್ಗದ ಅಜ್ಜಿಯರ ಜೀವನ  ಶೈಲಿಯ ಕಥನ . ಈ ಚಿತ್ರದಲ್ಲಿ ಮನೆಯ ಮೂಲೆಗುಂಪಾಗಿದ್ದ ಅಜ್ಜಿ ಯಾವ ರೀತಿ ತನ್ನನ್ನು ತಾನು ಬದುಕನ್ನು ಬದಲಾಯಿಸಿಕೊಳ್ಳ ಬಹುದು ಎನ್ನುವ ಮಾರ್ಗವನ್ನು ಮೊಮ್ಮಗ ತೋರಿಸಿಕೊಡುತ್ತಾನೆ. ಅಂತಿಮವಾಗಿ ಅಜ್ಜಿ ಸೂಪರ್ ಮಾಡಲ್ ಆಗುತ್ತಾರೆ. ಮೊಮ್ಮಗನ ಪಾತ್ರದಲ್ಲಿ ಶರ್ಮನ್   ಜೋಶಿ ನಟಿಸಿದ್ದಾರೆ. ರಣಧೀರ್ ಕಪೂರ್, ಅನುಮಪ್ ಖೇರ್, ಶ್ವೇತ ಕುಮಾರ್ ಸಹ ರೇಖಾ ಜೊತೆಯಾಗಿದ್ದಾರೆ. 
 
ಈ ಚಿತ್ರ ಇದೇ ತಿಂಗಳು 24  ರಂದು  ಬಿಡುಗಡೆ ಆಗಲಿದೆ. ಅಂದು ಶಾರುಖ್ ಖಾನ್ ಅಭಿನಯದ ಹ್ಯಾಪಿ ನ್ಯೂ ಇಯರ್ ಸಹಿತ ಬಿಡುಗಡೆ ಆಗಲಿದೆ.ಸೂಪರ್ ನಾನಿ ಚಿತ್ರವನ್ನು ಇಂದ್ರಕುಮಾರ್ ಅವರು ನಿರ್ದೇಶಿಸಲಿದ್ದು, ಇದಕ್ಕಾಗಿ ಪ್ರತಿಷ್ಠಿತ ಜಾಹೀರಾತು ಸಂಸ್ಥೆಯನ್ನು ಸಹಿತ ಚಿತ್ರಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಒಟ್ಟಾರೆ ಶಾರುಖ್ ಮತ್ತು ಅಜ್ಜಿ ಯುದ್ಧದಲ್ಲಿ ಗೆಲುವು ಯಾರಿಗೆ ನೋಡುವಾ !

ವೆಬ್ದುನಿಯಾವನ್ನು ಓದಿ