ಸಾಹಸ ಸಿಂಹನ ಪತ್ತೆದಾರಿ ಕಾಮಿಕ್ ಭಾಗ-2 ಲೋಕಾರ್ಪಣೆ

ಮಂಗಳವಾರ, 27 ಜನವರಿ 2015 (11:14 IST)
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರು ಪುಸ್ತಕ ರೂಪದಲ್ಲಿ ಬಂದು ಈಗಾಗಲೇ ಸಾಕಷ್ಟು ದಿನಗಳು ಪೂರ್ಣ ಗೊಂಡಿದೆ. ಸಾಹಸ ಸಿಂಹ ಡಾ. ವಿಷ್ಣುವರ್ಧನ ಪತ್ತೇದಾರಿ ಕಾಮಿಕ್ ಪುಸ್ತಕದ ಎರಡನೆ ಭಾಗವನ್ನು  ಅಮರ ಚಿತ್ರಕಥೆ ಪಬ್ಲಿಕೇಶನ್ ಕಳೆದ ಶುಕ್ರವಾರ ಬಿಡುಗಡೆ ಮಾಡಿತು. ಕನ್ನಡದ ಪ್ರಸಿದ್ಧ ನಟ  ದಿ, ಡಾ. ವಿಷ್ಣುಜಿ ಅವರ ಸಾಹಸ ಕಥೆಗಳ ಅವತರಣಿಕೆಯ ಪತ್ತೆಧಾರಿ ಕತೆಗಳು ಈ ಮೊದಲು ಬಿಡುಗಡೆ ಆಗಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. 
ಇದು ಬೆಂಗಳೂರು ನಗರದ ಕೋರಮಂಗಲದಲ್ಲಿರುವ ಪಿವಿಆರ್ ನಲ್ಲಿ ಬಿಡುಗಡೆ ಆಯಿತು. ಕಾರ್ಯಕ್ರಮದಲ್ಲಿ ಡಾ. ಭಾರತಿ ವಿಷ್ಣುವರ್ಧನ್, ನಟಿ ಪ್ರಿಯಾಂಕ ಉಪೇಂದ್ರ, ನಿಖಿತ ತುಕ್ರಾಲ್, ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ, ಮಗಳು ಕೀರ್ತಿ ಅನಿರುದ್ಧ  ಅಲ್ಲದೆ ಮೊಮ್ಮಕ್ಕಳಾದ ಜೇಷ್ಠ ಮತ್ತು ಶ್ಲೋಕ ಸಹಿತ ಭಾಗವಹಿಸಿದ್ದರು.
 
ಈ ಎರಡನೇ ಆವೃತ್ತಿಯಲ್ಲಿ ಪಿಕ್ ಪಾಕೆಟರ್  ಜಾಲವನ್ನು ಹಿಡಿಯುವ ಕೆಲಸವನ್ನು ಕಾಮಿಕ್ ಮೂಲಕ ಸಾಹಸ ಸಿಂಹ ಅವರು ಮಾಡಿದ್ದಾರೆ. ಇದರಲ್ಲಿ ಡಾ. ವಿಷ್ಣುವರ್ಧನ್ ಅಲ್ಲದೆ ಅವರ ಮೊಮ್ಮಕ್ಕಳಾದ ಜೇಷ್ಠ ಹಾಗೂ ಶ್ಲೋಕ ಇಬ್ಬರು ಮುಖ್ಯ ಪಾತ್ರಧಾರಿಗಳಾಗಿದ್ದಾರೆ. 
 

ವೆಬ್ದುನಿಯಾವನ್ನು ಓದಿ