ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನಟ ದರ್ಶನ್ ಇಂದು ಜಾಮೀನಿಗೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ. ಈ ಪ್ರಕರಣದಲ್ಲಿ ಸಾಕ್ಷ್ಯಗಳು ಅವರ ವಿರುದ್ಧವಾಗಿದ್ದರೂ ಜಾಮೀನು ಸಿಗಲು ದರ್ಶನ್ ಗೆ ರೇಣುಕಾಸ್ವಾಮಿಯ ನಡತೆಯೇ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.
ದರ್ಶನ್ ಮಾತ್ರವಲ್ಲದೆ, ಪವಿತ್ರಾ ಗೌಡಗೂ ಈ ವಿಚಾರ ಅನುಕೂಲವಾಗಬಹುದು. ಹತ್ಯೆಯಾದ ರೇಣುಕಾಸ್ವಾಮಿಯೂ ಸಚ್ಚಾರಿತ್ರ್ಯ ಹೊಂದಿರುವವನಲ್ಲ. ಆತ ಪವಿತ್ರಾ ಗೌಡ ಜೊತೆ ಮಾಡಿದ ಇನ್ ಸ್ಟಾಗ್ರಾಂ ಮತ್ತು ವ್ಯಾಟ್ಸಪ್ ಚ್ಯಾಟ್ ಗಳೇ ಇದಕ್ಕೆ ಸಾಕ್ಷಿ. ಅಶ್ಲೀಲ ಸಂದೇಶಗಳು, ಫೋಟೋಗಳನ್ನು ಕಳುಹಿಸುತ್ತಿದ್ದ.
ದರ್ಶನ್ ಮತ್ತು ಪವಿತ್ರಾ ಗೌಡ ಪರ ವಕೀಲರು ಜಾಮೀನು ಅರ್ಜಿ ವಿಚಾರಣೆ ವೇಳೆ ಈ ವಿಚಾರಗಳನ್ನು ಖಂಡಿತಾ ಉಲ್ಲೇಖಿಸಲಿದ್ದಾರೆ. ಆತನ ನಡತೆಯೂ ಸರಿಯಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶ. ಇದು ದರ್ಶನ್ ಆಂಡ್ ಗ್ಯಾಂಗ್ ಗೆ ಜಾಮೀನು ಪಡೆಯಲು ಪ್ಲಸ್ ಪಾಯಿಂಟ್ ಆಗಬಹುದು.
ಪೊಲೀಸರು ಕೋರ್ಟ್ ಗೆ ಸಲ್ಲಿಕೆ ಮಾಡಿರುವ ಚಾರ್ಜ್ ಶೀಟ್ ನಲ್ಲಿ ರೇಣುಕಾ ಮತ್ತು ಪವಿತ್ರಾ ನಡುವೆ ನಡೆದ ಚ್ಯಾಟಿಂಗ್ ನ್ನು ಉಲ್ಲೇಖಿಸಿದ್ದಾರೆ. ಈ ಕೇಸ್ ನಲ್ಲಿ ಪೊಲೀಸರು ಪಿನ್ ಟು ಪಿನ್ ಸಾಕ್ಷ್ಯ ಒದಗಿಸಿ ಕೇಸ್ ಸ್ಟ್ರಾಂಗ್ ಮಾಡಿದ್ದಾರೆ. ಇದರಿಂದ ದರ್ಶನ್ ಆಂಡ್ ಗ್ಯಾಂಗ್ ಗೆ ಶಿಕ್ಷೆಯಾದರೂ ಆಗಬಹುದು. ಆದರೆ ಅದಕ್ಕೆ ಮೊದಲು ವಿಚಾರಣೆ ನಡೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಈ ನಡುವೆ ರೇಣುಕಾಸ್ವಾಮಿ ನಡತೆ ಸರಿಯಿರಲಿಲ್ಲ ಎಂದು ವಕೀಲರು ಪ್ರೂವ್ ಮಾಡಿ ದರ್ಶನ್ ಆಂಡ್ ಗ್ಯಾಂಗ್ ಗೆ ಜಾಮೀನು ಕೊಡಿಸುವಲ್ಲಿ ಸಫಲವಾದರೂ ಅಚ್ಚರಿಯಿಲ್ಲ.