ಪ್ರಕರಣದಲ್ಲಿ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿತ್ತು. ಎಲ್ಲರೂ ಈಗ ಬೇರೆ ಬೇರೆ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪೈಕಿ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಪ್ರಕರಣದ ಎ15, ಎ16 ಮತ್ತು ಎ17 ಆರೋಪಿಗಳಿಗೆ ಜಾಮೀನು ನೀಡಲಾಗಿದೆ.
ಎ15 ಕಾರ್ತಿಕ್, ಎ17 ನಿಖಿಲ್ ನಾಯಕ್ ಮತ್ತು ಎ16 ಕೇಶವಮೂರ್ತಿಗೆ ಜಾಮೀನು ನೀಡಲಾಗಿದೆ. ಈ ಮೂವರು ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರಲಿಲ್ಲ. ಇವರು ಪೊಲೀಸ್ ಠಾಣೆಗೆ ತೆರಳಿ ಸರೆಂಡರ್ ಆಗಲು ಹೊರಟಿದ್ದವರು. ಹಣ ನೀಡಿ ಇವರನ್ನು ಸರೆಂಡರ್ ಮಾಡಿಸಲು ಪ್ಲ್ಯಾನ್ ಮಾಡಲಾಗಿತ್ತು.
ಇವರ ಮೇಲೆ ಸಾಕ್ಷ್ಯ ನಾಶ ಸೆಕ್ಷನ್ ನಲ್ಲಿ ಕೇಸ್ ದಾಖಲಿಸಲಾಗಿತ್ತು. ಇದು ಜಾಮೀನು ರಹಿತ ಪ್ರಕರಣವೇನೂ ಅಲ್ಲ. ಹೀಗಾಗಿ ಈಗ ಈ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಜಾಮೀನು ಪ್ರತಿ ಜೈಲಿಗೆ ತಲುಪಿದ ತಕ್ಷಣವೇ ಇವರು ಬಿಡುಗಡೆಯಾಗಲಿದ್ದಾರೆ. ಒಂದೆಡೆ ಈ ಮೂವರು ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೇ ಇತ್ತ ದರ್ಶನ್ ಅಭಿಮಾನಿಗಳಲ್ಲೂ ಭರವಸೆ ಮೂಡಿದೆ. ತಮ್ಮ ಬಾಸ್ ಗೂ ಮುಂದೆ ಜಾಮೀನು ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ.