ರಿಕ್ಕಿ ಕೇಜ್ ಬದುಕಲ್ಲಿ ವರ್ಷಗಾನ !

ಶನಿವಾರ, 10 ಮೇ 2014 (10:40 IST)
ರಿಕ್ಕಿ ಕೇಜ್‌  ರಮೇಶ್‌ ಅರವಿಂದ್‌. ಆಕ್ಸಿಡೆಂಟ್‌ ಚಿತ್ರದ ಮುಖಾಂತರ ಕನ್ನಡ ಜನತೆಗೆ ಗೊತ್ತಾದ  ಸಂಗೀತ ನಿರ್ದೇಶಕ. ಅವರನ್ನು ಕರೆತಂದವರು ಸಹ ರಮೇಶ್ ಅರವಿಂದ್. ರಿಕ್ಕಿ ರಮೇಶ್‌ ನಟಿಸಿದ ಒಂದಷ್ಟು ಚಿತ್ರಗಳಿಗೆ ಖಾಯಂ ಸಂಗೀತ ನಿರ್ದೇಶಕರಾದರು. ಸದಾ ಹೈ ಫೈ ಸಂಗೀತ ಲೋಕದಲ್ಲಿ ವಿಹರಿಸುವ ಈ ಪ್ರತಿಭೆಯು ಕನ್ನಡಕ್ಕೆ ಸಂಗೀತ  ನೀಡಿದ್ದು  ಒಂದು ವಿಸ್ಮಯ ಎನ್ನ ಬಹುದು.

ಸದಾ ಇಂಗ್ಲಿಷ್‌ ಮಾತಾಡುವ, , ಪ್ರಶಸ್ತಿ ಪಡೆಯುವ, ಒಲಿಂಪಿಕ್ಸ್‌ಗೆ ಸಂಗೀತ ನೀಡುವ, ಹೀಗೆ ಎಲ್ಲವು ಶ್ರೀಮಂತಿಕೆಯ ಮಿತಿಯಲ್ಲೇ  ನಡೆಯುವ ಕೆಲಸಗಳಲ್ಲಿ ಸದಾ ಬ್ಯುಸಿ ಆಗಿರುವ  ರಿಕ್ಕಿ ಕೇಜ್‌ ಅನೇಕ ಸೀರಿಯಲ್ಲುಗಳಿಗೂ ಸಂಗೀತ ನೀಡಿದ್ದಾರೆ. ಶುಭಮಂಗಳ ಸೀರಿಯಲ್ಲಿನ ಶೀರ್ಷಿಕೆ ಗೀತೆಯ ಸಂಗೀತ ರಿಕ್ಕಿ ನೀಡಿರೋದು. 
 
ಇಷ್ಟೆಲ್ಲಾ ಬದುಕಿನ ನಡುವೆ ಈಗ ದಾಂಪತ್ಯ ಬದುಕಿಗೂ ಕಾಲಿಟ್ಟಿದ್ದಾರೆ. ಅವರ ಮನ ಗೆದ್ದ ಹುಡುಗಿ  ವರ್ಷಾ ಗೌಡ . ಹಲವಾರು ದಿನಗಳಿಂದ ಪ್ರೀತಿಸುತ್ತಿದ್ದ ರಿಕ್ಕಿ ಮತ್ತು ವರ್ಷಾ ಇದೀಗ ವಿಧ್ಯುಕ್ತವಾಗಿ ದಾಂಪತ್ಯಗೀತ ಹಾಡಲು ಸಿದ್ಧವಾಗಿದ್ದಾರೆ. ಇಷ್ಟು ದಿನ ವರ್ಷ ಗೌಡ ಆಗಿದ್ದ ಈ ಜೇನ್ ಈಗ ವರ್ಷ ಕೇಜ್ ಆಗಿದ್ದಾರೆ. ಅವರ ಬದುಕು ಸುಂದರ ಆಹ್ಲಾದ ಸಂಗೀತದಂತೆ ಸಾಗಲಿ ಎನ್ನುವ ಶುಭ ಹಾರೈಕೆ ನಮ್ಮದು.  

ವೆಬ್ದುನಿಯಾವನ್ನು ಓದಿ