‘ಕಾಂತಾರ’ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ಹೊಂಬಾಳೆ ಫಿಲಂಸ್
ಕಾಂತಾರ ಸಿನಿಮಾದ ಮೊದಲ ಹಾಡು ಸಿಂಗಾರ ಸಿರಿಯೆ ಆಗಸ್ಟ್ 15 ರಂದು ಅಂದರೆ ಸ್ವಾತಂತ್ರ್ಯೋತ್ಸವದಂದು ಲಾಂಚ್ ಆಗಲಿದೆ. ಸೋಮವಾರ 12.58 ಕ್ಕೆ ಸಿನಿಮಾದ ಹಾಡು ಬಿಡುಗಡೆಯಾಗಲಿದೆ.
ಕಂಬಳ ಹಿನ್ನಲೆಯ ಕರಾವಳಿಯ ಕತೆಯಿರುವ ಹೊಂಬಾಳೆ ಸಿನಿಮಾದ ಟೀಸರ್ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಸಿನಿಮಾ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ.