ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ನಿರ್ಧಾರ ಸ್ವಾಗತಿಸಿದ ರಿಷಬ್ ಶೆಟ್ಟಿ
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ ‘ಬ್ಯಾಂಕಿಂಗ್ ಹೋದಾಗ ಅಲ್ಲಿನ ಸಿಬ್ಬಂದಿಗಳಿಗೆ ಕನ್ನಡ ಬಾರದೇ ಏನೇನೋ ಎಡವಟ್ಟುಗಳ ಆದ ಅನುಭವ ಎಲ್ಲರಿಗೂ ಆಗಿದೆ. ಇನ್ನು ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡವೂ ಸೇರಿದಂತೆ13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ತೀರ್ಮಾನಿಸಿರುವ ಕೇಂದ್ರದ ನಿರ್ಧಾರ ಸ್ವಾಗತಾರ್ಹ. ಇದರಿಂದ ಸ್ಥಳೀಯರಿಗೆ ಉದ್ಯೋಗ ದೊರಕಿದಂತಾಗುತ್ತದೆ. ಇದೇ ರೀತಿ ರೈಲ್ವೇ ಇಲಾಖೆ, ಶಿಕ್ಷಣ ಇಲಾಖೆ, ಕಾನೂನು ಇಲಾಖೆಗಳಲ್ಲಿ ಆಯಾ ಸ್ಥಳೀಯರಿಗೆ ಪ್ರಾತಿನಿಧ್ಯ ದೊರೆತಲ್ಲಿ ಆಯಾ ನೆಲದ ಸಂಸ್ಕೃತಿ, ಭಾಷೆ ಉಳಿದಂತಾಗುತ್ತದೆ’ ಎಂದು ರಿಷಬ್ ಬರೆದುಕೊಂಡಿದ್ದಾರೆ.