ಅವರ ಆರೋಗ್ಯ ಸರಿಯಿದೆಯಾ? ಏನು ಮಾಡ್ತಿದ್ದಾರೆ ಅವರು? ಚೇತನ್ ಆರೋಪಕ್ಕೆ ರಿಷಬ್ ಶೆಟ್ಟಿ ಟಾಂಗ್
ತೆಲುಗು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಿಷಬ್ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ಅವರ ಆರೋಪಕ್ಕೆ ನನ್ನದು ನೋ ಕಾಮೆಂಟ್ಸ್ ಎಂದಿದ್ದಾರೆ.
‘ಅವರು ಏನು ಮಾಡ್ತಾರೆ? ಅವರ ಆರೋಗ್ಯ ನೋಡಿಕೊಳ್ಳಲಿ’ ಎಂದು ನಕ್ಕ ರಿಷಬ್ ಬಳಿಕ ‘ನಾನು ಈ ಸಿನಿಮಾವನ್ನು ಮಾಡುವಾಗ ಈ ದೈವಾರಾಧನೆ ಮಾಡುವಂತಹ ಜನರೇ ನನ್ನ ಜೊತೆಗಿದ್ದರು. ಪ್ರತೀ ಶಾಟ್ ಬಗ್ಗೆ ಅವರನ್ನು ಕೇಳಿಕೊಂಡು ಆ ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಈ ಸಿನಿಮಾ ಮಾಡಿದ್ದೇವೆ. ಮತ್ತೆ, ನಾನು ಅದೇ ತುಳುನಾಡಿನಿಂದ ಬಂದವನು. ದೈವಾರಾಧನೆ ಎಲ್ಲವನ್ನೂ ಚಿಕ್ಕ ವಯಸ್ಸಿನಿಂದಲೇ ನೋಡಿಕೊಂಡು ಬಂದವನು. ಹಾಗಾಗಿ ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿತ್ತು. ನನ್ನ ಜೀವಹಿಂಡಿ ಈ ಸಿನಿಮಾಗೆ ಕೆಲಸ ಮಾಡಿದ್ದೇನೆ. ಸಿನಿಮಾ ಮಾಡುವುದು ನನ್ನ ಕೆಲಸ. ಚೇತನ್ ಆರೋಪಗಳಿಗೆ ಅದಕ್ಕೆ ಸಂಬಂಧಪಟ್ಟವರೇ ಉತ್ತರ ಕೊಡುತ್ತಾರೆ. ನನ್ನದು ನೋ ಕಾಮೆಂಟ್ಸ್’ ಎಂದಿದ್ದಾರೆ.