ಒಂದು ಹಿಟ್ ಚಿತ್ರಕ್ಕೆ ಕನ್ನಡ ಬಿಟ್ಟು ಓಡಿ ಹೋಗೋನಲ್ಲ ನಾನು: ರಿಷಬ್ ಶೆಟ್ಟಿ

ಬುಧವಾರ, 29 ನವೆಂಬರ್ 2023 (09:00 IST)
ಪಣಜಿ: ಕಾಂತಾರ ಒಂದು ಸಿನಿಮಾ ಹಿಟ್ ಆಯ್ತು ಎಂದು ಕನ್ನಡ ಬಿಟ್ಟು ಬೇರೆ ಭಾಷೆಗಳಿಗೆ ಓಡಿ ಹೋಗಲ್ಲ. ಕನ್ನಡವೇ ನನ್ನ ಮೊದಲ ಆದ್ಯತೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.

ಐಎಫ್ಎಫ್ಐ ಚಿತ್ರೋತ್ಸವದಲ್ಲಿ ಕಾಂತಾರ ಸಿನಿಮಾ ಪ್ರದರ್ಶನದ ಬಳಿಕ ಮಾತನಾಡಿದ ರಿಷಬ್ ಈ ರೀತಿ ಹೇಳಿದ್ದಾರೆ. ಗೋವಾ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ರಿಷಬ್ ಕಾಂತಾರ ಸಿನಿಮಾಗಾಗಿ ಸ್ಪೆಷಲ್ ಜ್ಯೂರಿ ಅವಾರ್ಡ್ ಕೂಡಾ ಪಡೆದಿದ್ದಾರೆ.

ಸಂವಾದದಲ್ಲಿ ತಮಗೆ ಪರಭಾಷೆಗಳಿಂದ ಬಂದ ಅವಕಾಶಗಳ ಬಗ್ಗೆ ರಿಷಬ್ ಮುಕ್ತವಾಗಿ ಮಾತನಾಡಿದ್ದಾರೆ. ಹಿಂದಿ ಸೇರಿದಂತೆ ಬೇರೆ ಭಾಷೆಗಳಿಂದ ಸಾಕಷ್ಟು ಆಫರ್ ಬಂದಿದೆ. ಆದರೆ ನಾನು ಕನ್ನಡ ಚಿತ್ರರಂಗದವನು.ಅಲ್ಲಿಯೇ ಕೆಲಸ ಮಾಡಲು ಇಚ್ಛಿಸುವೆ ಎಂದಿದ್ದಾರೆ.

ಕಾಂತಾರವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದವರು ಕನ್ನಡಿಗರು. ಅವರ ಋಣ ಮರೆಯಲಾರೆ. ಕಾಂತಾರದ ಯಶಸ್ಸು ತಲೆಗೆ ಏರಿಲ್ಲ. ಅದನ್ನು ಹೃದಯದಲ್ಲೇ ಇಟ್ಟುಕೊಂಡಿದ್ದೇನೆ. ಒಂದು ವೇಳೆ ಯಶಸ್ಸು ನನ್ನ ತಲೆಗೇರಿದರೆ ಅದೇ ನನ್ನ ಕೊನೆಯ ಸಿನಿಮಾ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ