ಇದ್ದಕ್ಕಿದ್ದಂತೆ ಕಾಂತಾರ ಚಾಪ್ಟರ್ 1 ಶೂಟಿಂಗ್ ನಿಲ್ಲಿಸಿದ ರಿಷಬ್ ಶೆಟ್ಟಿ, ಕಾರಣವೇನು

Krishnaveni K

ಮಂಗಳವಾರ, 9 ಜುಲೈ 2024 (16:57 IST)
ಕುಂದಾಪುರ: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಬಗ್ಗೆ ಅಭಿಮಾನಿಗಳು ಕಾತುರದಿಂದ ಎದಿರು ನೋಡುತ್ತಿದ್ದಾರೆ.  ಆದರೆ ಇದೀಗ ಕುಂದಾಪುರದಲ್ಲಿ ನಡೆಯುತ್ತಿದ್ದ ಸಿನಿಮಾ ಚಿತ್ರೀಕರಣವನ್ನು ರಿಷಬ್ ಶೆಟ್ಟಿ ಇದ್ದಕ್ಕಿದ್ದಂತೆ ನಿಲ್ಲಿಸಿದ್ದಾರೆ. ಅದಕ್ಕೆ ಕಾರಣವೇನು ನೋಡಿ.

ಕಳೆದ ಕೆಲವು ಸಮಯದಿಂದ ರಿಷಬ್ ಶೆಟ್ಟಿ ತಮ್ಮ ತವರು ಕುಂದಾಪುರದಲ್ಲಿಯೇ ಬೀಡುಬಿಟ್ಟಿದ್ದಾರೆ. ತಮ್ಮ ಮಕ್ಕಳನ್ನೂ ಕುಂದಾಪುರದಲ್ಲಿಯೇ ಶಾಲೆಗೆ ಸೇರಿಸಿದ್ದಾರೆ. ಫ್ಯಾಮಿಲಿ ಸಮೇತ ಕುಂದಾಪುರಕ್ಕೆ ಶಿಫ್ಟ್ ಆಗಿರುವ ರಿಷಬ್ ಇದ್ದಕ್ಕಿಂತೆ ಶೂಟಿಂಗ್ ಸ್ಥಗಿತಗೊಳಿಸಲು ಕಾರಣವೇನು?

ಕಳೆದ ಒಂದು ವಾರದಿಂದ ಉಡುಪಿ-ಕುಂದಾಪುರ ಕಡೆ ವಿಪರೀತ ಮಳೆಯಾಗುತ್ತಿದೆ. ಕರಾವಳಿಯಲ್ಲಿ ಮಳೆ ಎಂದರೆ ಗೊತ್ತಲ್ಲ? ಬಿಟ್ಟೂ ಬಿಡದೇ ಸುರಿಯುವ ಮಳೆಯಿಂದಾಗಿ ಶೂಟಿಂಗ್ ಗೆ ತೊಂದರೆಯಾಗುತ್ತಿದೆ. ಚಿತ್ರೀಕರಣಕ್ಕಾಗಿ ರಿಷಬ್ ವಿಶೇಷ ಸೆಟ್ ಹಾಕಿಸಿದ್ದಾರೆ. ಭಾರೀ ಮಳೆಯಿಂದ ಚಿತ್ರೀಕರಣ ನಡೆಸಲೂ ಸಾಧ್ಯವಾಗದ ಪರಿಸ್ಥಿತಿಯಿದೆ.

ಹೀಗಾಗಿ ಇದೀಗ ಮಳೆ ಮುಗಿಯುವವರೆಗೆ ಕಾಂತಾರ ಚಾಪ್ಟರ್ 1 ಶೂಟಿಂಗ್ ಗೆ ಬ್ರೇಕ್ ಕೊಡಲು ರಿಷಬ್ ತೀರ್ಮಾನಿಸಿದ್ದಾರೆ. ಮಳೆ ಮುಗಿದ ಬಳಿಕ ಶೂಟಿಂಗ್ ಮತ್ತೆ ಮುಂದುವರಿಯಲಿದೆ. ಕಾಂತಾರ ಸಿನಿಮಾ ಸಕ್ಸಸ್ ಆದ ಬಳಿಕ ಹೊಂಬಾಳೆ ಫಿಲಂಸ್ ಎರಡನೇ ಭಾಗ ನಿರ್ಮಾಣಕ್ಕೆ ಮುಂದಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ