ನಿಮ್ಮ ಸಮರ್ಪಣೆಯನ್ನು ಗೌರವಿಸುತ್ತೇವೆ: ಮೋದಿಗೆ ರಿಷಬ್ ಶೆಟ್ಟಿ ಸಂದೇಶ

Krishnaveni K

ಸೋಮವಾರ, 10 ಜೂನ್ 2024 (10:09 IST)
Photo Credit: X
ಬೆಂಗಳೂರು: ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರುತ್ತಿರುವ ನರೇಂದ್ರ ಮೋದಿಯವರಿಗೆ ಸಿನಿಮಾ ತಾರೆಯರೂ ಶುಭ ಕೋರಿದ್ದಾರೆ. ನಟ ರಿಷಬ್ ಶೆಟ್ಟಿ ಪ್ರಧಾನಿ ಮೋದಿಗೆ ನಿಮ್ಮ ಸಮರ್ಪಣೆಯನ್ನು ಗೌರವಿಸುತ್ತೇವೆ ಎಂದು ಸಂದೇಶ ಕಳುಹಿಸಿದ್ದಾರೆ.

ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ನಿನ್ನೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ನಟರಾದ ರಜನೀಕಾಂತ್, ಶಾರುಖ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಸಿನಿಮಾ ತಾರೆಯರೂ ಆಗಮಿಸಿದ್ದರು.

ಇದರ ನಡುವೆ ಮೋದಿಗೆ ಸೋಷಿಯಲ್ ಮೀಡಿಯಾ ಮೂಲಕವೂ ಕೆಲವರು ಶುಭ ಕೋರಿದ್ದಾರೆ. ಬಹುಭಾಷಾ ನಟ ಮಾಧವನ್, ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಮುಂತಾದವರು ಸೋಷಿಯಲ್ ಮೀಡಿಯಾ ಮೂಲಕ ಮೋದಿ ಮೂರನೇ ಅವಧಿಗೆ ಶುಭಾಶಯದ ಸಂದೇಶ ಬರೆದಿದ್ದಾರೆ.

‘ಮೂರನೇ ಬಾರಿಗೆ ಅಧಿಕಾರಕ್ಕೇರುತ್ತಿರುವ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಅಭಿವೃದ್ಧಿ , ಶಿಕ್ಷಣ ಮತ್ತು ರಾಷ್ಟ್ರೀಯ ಸುರಕ್ಷತೆ ಕಡೆಗೆ ನಿಮ್ಮ ಸಮರ್ಪಣೆಯನ್ನು ಗೌರವಿಸುತ್ತೇವೆ’ ಎಂದು ರಿಷಬ್ ಶುಭಾಶಯ ಸಂದೇಶ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ