ಊಹಿಸಲಾಗದ್ದನ್ನು ಸಾಧಿಸಿದ ರಿಷಭ್‌ ಶೆಟ್ಟಿ: ಕಾಂತಾರ 1 ಸಿನಿಮಾವನ್ನು ಕೊಂಡಾಡಿದ ಜ್ಯೂ.ಎನ್‌ಟಿಆರ್‌, ಶಿವಣ್ಣ

Sampriya

ಗುರುವಾರ, 2 ಅಕ್ಟೋಬರ್ 2025 (15:35 IST)
ಬೆಂಗಳೂರು: ಅದ್ಭುತ ಯಶಸ್ಸನ್ನು ಗಳಿಸಿದ ಕಾಂತಾರ–1 ಚಿತ್ರ ತಂಡಕ್ಕೆ ಅಭಿನಂದನೆಗಳು. ರಿಷಬ್ ಶೆಟ್ಟಿ ಸರ್ ಒಬ್ಬ ಅದ್ಭುತ ನಟನಾಗಿ ಮಾತ್ರವಲ್ಲ ಅದ್ಭುತ ನಿರ್ದೇಶಕನಾಗಿ ಊಹಿಸಲಾಗದ್ದನ್ನು ಸಾಧಿಸಿದ್ದಾರೆ ಎಂದು ಟಾಲಿವುಡ್ ನಟ ಜ್ಯೂನಿಯರ್ ಎನ್‌ಟಿಆರ್ ಕೊಂಡಾಡಿದ್ದಾರೆ. 

ಬಹುನಿರೀಕ್ಷಿತ ಕಾಂತಾರ ಅಧ್ಯಾಯ–1 ಸಿನಿಮಾ ಇಂದು ತೆರೆ ಕಂಡಿದೆ. ವಿಶ್ವದಾದ್ಯಂತ ಸಿನಿ ಪ್ರೇಕ್ಷಕರು ಸಿನಿಮಾಗೆ ಉತ್ತಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಚಿತ್ರ ನೋಡಿದ ಚಿತ್ರನಟರು, ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು. ರಿಷಬ್ ಸರ್ ಅವರ ಯೋಚನೆಗಳನ್ನು ಬೆಂಬಲಿಸಿದ್ದಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಅವರಿಗೂ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ ಎಂದು ಜೂ.ಎನ್‌ಟಿಆರ್‌ ಹೇಳಿದ್ದಾರೆ.

ಕಾಂತಾರ ನಮ್ಮ ನೆಲದ ಕಥೆ. ನಮ್ಮ ನಾಡಿನ ಕಥೆ. ಇಂದು ಕಾಂತಾರವನ್ನು ಇಡೀ ದೇಶವೇ ಮೆಚ್ಚುತ್ತಿರುವುದು ತುಂಬಾ ಹೆಮ್ಮೆಯ ವಿಷಯ. ರಿಷಬ್ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್, ವಿಜಯ್ ಕಿರಗುಂದೂರು, ಬಿ ಅಜನೀಶ್ ಲೋಕನಾಥ್ ಮತ್ತು ಇಡೀ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ ಮೂಲಕ ಶಿವರಾಜ್‌ ಕುಮಾರ್‌ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ