ಗಂಡು ಕೂಸಿನ ತಾಯ್ತಂದೆಯಾದ ರಿತೇಶ್ -ಜೆನಿಲಿಯ

ಬುಧವಾರ, 26 ನವೆಂಬರ್ 2014 (10:02 IST)
ಬಾಲಿವುಡ್ ಚಿತ್ರದಿಂದ ತನ್ನ ಕೆರಿಯರ್ ಆರಂಭ ಮಾಡಿದರು ಸಹಿತ ಆಕೆ ನೆಲೆ ಕಂಡಿದ್ದು ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ. ಟಾಲಿವುಡ್ ಮತ್ತು ಕಾಲಿವುಡ್ ಚಿತ್ರಗಳಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದ ಜೆನಿಲಿಯ ಡಿಸೋಜ ಕನ್ನಡ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅವರ ಜೊತೆ ಅಭಿನಯಿಸಿದ್ದಳು. 

ಅದಾದ ಬಳಿಕ ಆಕೆ ಸಂಪೂರ್ಣವಾಗಿ ಟಾಲಿವುಡ್  ಚಿತ್ರಗಳಲ್ಲಿ ತನ್ನನ್ನು ಇನ್ವಾಲ್ವ್ ಮಾಡಿಕೊಂಡಿದ್ದು ಹಳೆಯ ಕಥೆ. ಜೆನಿಲಿಯ  ಹಾಗು ಬಾಲಿವುಡ್ ನಟ  ರಿತೇಶ್ ದೇಶ್ ಮುಖ್ ಬಹಳ ಕಾಲದ ಪ್ರೀತಿಯಲ್ಲಿ ಮುಳುಗೇಳುತ್ತಿದ್ದರು. ಅದಕ್ಕೊಂದು ಅಂತಿಮ ತೀರ್ಪು ನೀಡಲು ಈ ಜೋಡಿ  2012 ರಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟರು. ಈಗ ಈ ಜೋಡಿ ತಾಯಿ ತಂದೆ ಆಗಿದ್ದಾರೆ . ಬಾಲಿವುಡ್ ಭರವಸೆಯ ನಟ ರಿತೇಶ್ ತಮ್ಮ ಈ ಖುಷಿಯನ್ನು   ಟ್ವೀಟಿಸಿ ವ್ಯಕ್ತ ಪಡಿಸಿದ್ದಾರೆ. ಬಾಯ್ ("It's a BBBOOOOYYYYYY!!!!!!!!") ಎಂದು ಟ್ವೀಟ್ ಮಾಡಿ ಜಗತ್ತಿಗೆ ಈ ಖುಷಿ ಹಂಚಿದ್ದಾರೆ.
 
ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ ಮುಖ್ ಅವರ ಮಗ ರಿತೇಶ್ ಸಿನಿಮಾ ರಂಗದಲ್ಲಿ ತನ್ನನ್ನು ತೊಡಗಿಸಿಕೊಂಡರು. ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ರಿತೇಶ್ ಈಗ ಯಶ್ ಚೋಪ್ರ ನಿರ್ಮಾಣ ಸಂಸ್ಥೆಯಿಂದ ತಯಾರಾಗುತ್ತಿರುವ  ಬ್ಯಾಂಕ್ ಚೋರ್ ಚಿತ್ರಕ್ಕೆ  ಆಯ್ಕೆ ಆಗಿದ್ದಾರೆ. 

ವೆಬ್ದುನಿಯಾವನ್ನು ಓದಿ