ರಾಬರ್ಟ್ ಈವೆಂಟ್ ನಲ್ಲಿ ಡಿ ಬಾಸ್ ದರ್ಶನ್ ನೋಡಲು ಫ್ಯಾನ್ಸ್ ನೂಕುನುಗ್ಗಲು

ಸೋಮವಾರ, 1 ಮಾರ್ಚ್ 2021 (09:18 IST)
ಹುಬ್ಬಳ್ಳಿ: ರಾಬರ್ಟ್ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ನಿನ್ನೆ ಹುಬ್ಬಳ್ಳಿಯ ರೈಲ್ವೇ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಅಭಿಮಾನಿಗಳು ನೆರೆದಿದ್ದರು.


ತಮ್ಮ ನೆಚ್ಚಿನ ನಾಯಕನನ್ನು ನೋಡಲು ಅಭಿಮಾನಿಗಳು ನೂಕುನುಗ್ಗಲು ನಡೆಸಿದರು. ಈ ಕಾರ್ಯಕ್ರಮಕ್ಕೆ ಸಚಿವ ಜಗದೀಶ್ ಶೆಟ್ಟರ್, ಬಿಸಿ ಪಾಟೀಲ್ ಸೇರಿದಂತೆ ರಾಜಕೀಯ ಗಣ್ಯರೂ ಆಗಮಿಸಿದ್ದರು.  ಇನ್ನು, ದರ್ಶನ್ ವೇದಿಕೆಗೆ ಬರುತ್ತಿದ್ದಂತೇ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಕೊನೆಗೆ ಪೊಲೀಸರು ಲಾಠಿ ರುಚಿ ತೋರಿಸಬೇಕಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ