ಡಾರ್ಲಿಂಗ್ ಕೃಷ್ಣ ಈಗ ನಿರ್ಮಾಪಕರ ಡಾರ್ಲಿಂಗ್

ಸೋಮವಾರ, 1 ಮಾರ್ಚ್ 2021 (08:52 IST)
ಬೆಂಗಳೂರು: ನಟ ಡಾರ್ಲಿಂಗ್ ಕೃಷ್ಣಗೆ ಲವ್ ಮಾಕ್ಟೇಲ್ ಸಿನಿಮಾ ಬಳಿಕ ಅದೃಷ್ಟ ಖುಲಾಯಿಸಿದೆ. ಇದಕ್ಕೆ ಅವರ ಕೈಯಲ್ಲಿರುವ ಸಾಲು ಸಾಲು ಚಿತ್ರಗಳೇ ಸಾಕ್ಷಿ.


ಲವ್ ಮಾಕ್ಟೇಲ್ ಸಿನಿಮಾ ಗೆದ್ದ ಬಳಿಕ ಕೃಷ್ಣ ಇದರ ಎರಡನೆಯ ಭಾಗ ಮಾಡಿ ಮುಗಿಸಿದ್ದಾರೆ. ಇದಲ್ಲದೆ, ಇದಲ್ಲದೆ ಕೃಷ್ಣ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ಲವ್ ಮಾಕ್ಟೇಲ್ ಅಲ್ಲದೆ ಶುಗರ್ ಫ್ಯಾಕ್ಟರಿ, ವರ್ಜಿನ್, ಶ್ರೀಕೃಷ್ಣ ಎಟ್ ಜಿ ಮೇಲ್ ಡಾ.ಕಾಮ್, ಲೋಕಲ್ ಟ್ರೈನ್‍ ಸಿನಿಮಾಗಳಿಗೂ ಕೃಷ್ಣ ನಾಯಕ. ಇವೆಲ್ಲವೂ ಈ ವರ್ಷವೇ ಬಿಡುಗಡೆಯಾದರೆ ಕೃಷ್ಣ ಸ್ಯಾಂಡಲ್ ವುಡ್ ನ ಬ್ಯುಸಿಯೆಸ್ಟ್ ಹೀರೋ ಎನಿಸಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ