ರಾಬರ್ಟ್ ಜೊತೆಗೆ ನಿಮ್ಮ ಊರಿಗೇ ಬರಲಿದ್ದಾರೆ ಡಿ ಬಾಸ್ ದರ್ಶನ್

ಬುಧವಾರ, 24 ಮಾರ್ಚ್ 2021 (09:52 IST)
ಬೆಂಗಳೂರು: ರಾಬರ್ಟ್ ಸಿನಿಮಾದ ಯಶಸ್ಸಿನಿಂದ ಉತ್ಸಾಹಗೊಂಡಿರುವ ಚಿತ್ರತಂಡ ಈಗ ರಾಜ್ಯ ಪ್ರವಾಸ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಹೇಳುವ ಕಾರ್ಯಕ್ರಮ ಹಮ್ಮಿಕೊಂಡಿದೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಚಿತ್ರತಂಡ ಪ್ರಮುಖ ಊರುಗಳಿಗೆ ಭೇಟಿ ನೀಡಿ ಅಭಿಮಾನಿಗಳಿಗೆ ‍ಧನ್ಯವಾದ ಸಲ್ಲಿಸಲು ನಿರ್ಧರಿಸಿದೆ. ಈಗಾಗಲೇ ಚಿತ್ರತಂಡ ಇದಕ್ಕೆ ತಯಾರಿ ನಡೆಸಿದೆ.

ಮಾರ್ಚ್ 29 ರಿಂದ ಏಪ್ರಿಲ್ 1 ರವರೆಗೆ ಚಿತ್ರತಂಡ ಬೇರೆ ಬೇರೆ ಊರುಗಳಿಗೆ ಭೇಟಿ ನೀಡಲಿದೆ. ಮಾರ್ಚ್ 29 ರಂದು ತುಮಕೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಮಾರ್ಚ್ 30 ರಂದು ಧಾರವಾಡ, ಹುಬ್ಬಳ್ಳಿ, ಹಾವೇರಿಯಲ್ಲಿ ಮಾರ್ಚ್ 31 ರಂದು ಶಿವಮೊಗ್ಗ, ಹಾಸನ, ತಿಪಟೂರಿಗೆ ಹಾಗೂ ಅಂತಿಮ ದಿನ ಗುಂಡ್ಲುಪೇಟೆ, ಮೈಸೂರು, ಮಂಡ್ಯ, ಮದ್ದೂರಿಗೆ ಭೇಟಿ ಕೊಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ