ಅಭಿಮಾನಿಗಳು ಹುಡುಕ್ಕೊಂಡು ಬಂದು ಹೊಡೀತಾರೆ: ನಟ ಆದಿತ್ಯ ಆಕ್ರೋಶಗೊಂಡಿದ್ದೇಕೆ?!
ಸಿನಿಮಾ ಬಗ್ಗೆ ನಿಮಗೇನ್ರೀ ಗೊತ್ತು? ಡೈರೆಕ್ಟರ್, ಆರ್ಟಿಸ್ಟ್ ಆಗಿ ದುಡಿದು ನೋಡಿ. ನಮ್ಮ ಕಷ್ಟ ಏನು ಅಂತ ಗೊತ್ತಾಗುತ್ತೇ? ಹಗಲು ರಾತ್ರಿ ಸಿನಿಮಾವನ್ನು ಕಷ್ಟಪಟ್ಟು ಮಾಡಿದ್ರೆ ಡಬ್ಬಾ ಥರಾ ಮಾತಾಡ್ತೀರಾ. ದುಡ್ಡು ಕೊಡದೇ ಇದ್ರೆ ಸಿನಿಮಾ ಬಗ್ಗೆ ಕೆಟ್ಟದಾಗಿ ಮಾತನಾಡ್ತೀರಿ. ದಯವಿಟ್ಟು ಕನ್ನಡ ಸಿನಿಮಾ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡುವುದನ್ನು ನಿಲ್ಲಿಸಿ. ಇಲ್ಲದೇ ಹೋದರೆ ಅಭಿಮಾನಿಗಳು ಹುಡುಕ್ಕೊಂಡು ಬಂದು ಹೊಡೀತಾರೆ ಎಂದು ಆದಿತ್ಯ ಎಚ್ಚರಿಕೆ ನೀಡಿದ್ದಾರೆ.