100 ಕೋಟಿ ಕ್ಲಬ್ ಸೇರಲಿರುವ ರಾಬರ್ಟ್: ಫ್ಯಾನ್ಸ್ ಗೆ ಥ್ಯಾಂಕ್ಸ್ ಹೇಳಿದ ದರ್ಶನ್

ಭಾನುವಾರ, 21 ಮಾರ್ಚ್ 2021 (10:02 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬ್ಲಾಕ್ ಬ್ಲಸ್ಟರ್ ಸಿನಿಮಾವಾಗಿದ್ದು, 100 ಕೋಟಿ ಕ್ಲಬ್ ಸೇರ್ಪಡೆಯಾಗುವತ್ತ ದಾಪುಗಾಲಿಡುತ್ತಿದೆ.


ಈ ಸಿನಿಮಾ ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಗಳನ್ನು ದೂಳೀಪಟ ಮಾಡಿ ಮುನ್ನುಗ್ಗುತ್ತಿದೆ. ಇದರೊಂದಿಗೆ 100 ಕೋಟಿ ಕ್ಲಬ್ ಸೇರಿದ ಮತ್ತೊಂದು ಕನ್ನಡ ಸಿನಿಮಾವಾಗಲಿದೆ.

ಸಿನಿಮಾ ಎರಡನೇ ವಾರದ ಬಳಿಕವೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಹಿನ್ನಲೆಯಲ್ಲಿ ದರ್ಶನ್ ಅಭಿಮಾನಿಗಳಿಗೆ ಟ್ವಿಟರ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ರಾಬರ್ಟ್ ಮೊದಲ ದಿನದಿಂದಲೇ ಗಳಿಕೆ ವಿಚಾರದಲ್ಲಿ ಮುಚ್ಚುಮರೆ ಮಾಡಿಲ್ಲ. ಎಲ್ಲವನ್ನೂ ಬಹಿರಂಗವಾಗಿ ಲೆಕ್ಕಕೊಡುತ್ತಲೇ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ