ರಾಕೆಟ್ ಸಿನಿಮಾದಿಂದಾಗಿ ನನಗೆ ಬಹಳ ಒಳ್ಳೆಯದಾಗಿದೆ- ನೀನಾಸಂ ಸತೀಶ್

ಶನಿವಾರ, 16 ಜನವರಿ 2016 (12:54 IST)
ನೀನಾಸಂ ಸತೀಶ್ ಚೊಚ್ಚಲ ನಿರ್ಮಾಣದ ಸಿನಿಮಾ ರಾಕೆಟ್. ಈ ಸಿನಿಮಾದ ಬಗ್ಗೆ ಸತೀಶ್ ಅವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದ್ರೆ ಈ ಸಿನಿಮಾ ಸತೀಶ್ ಅವರಿಗೆ ನಿರೀಕ್ಷಿಸಿದಷ್ಟು ಯಶಸ್ಸು ತಂದುಕೊಡಲಿಲ್ಲ.ಆದ್ರೆ ಸಿನಿಮಾ ಮಾತ್ರ ನನಗೆ ಉತ್ತಮ ಇಮೇಜ್ ಕೊಟ್ಟಿದೆ ಅಂತಾ ಅವರು ಹೇಳಿದ್ದಾರೆ.
 
ಸಿನಿಮಾ ಗೆಲ್ಲಲಿಲ್ಲ ಅಂತಾ ನನಗೆ ಬೇಸರವಾಗಿದ್ದದ್ದು ನಿಜ ಆದ್ರೆ ಸಿನಿಮಾ ನನ್ನ ವೃತ್ತಿ ಬದುಕಿಗೊಂದು ಪ್ಲಸ್ ಪಾಯಿಂಟ್ ಅಂತಾ ಅವರು ಹೇಳಿದ್ದಾರೆ. ಅಲ್ಲದೇ ಸಿನಿಮಾ ನನಗೆ ಬೇರೆಯದ್ದೇ ಆದ ಇಮೇಜ್ ಒಂದನ್ನು ತಂದುಕೊಟ್ಟಿದೆ ಅಂತಾ ಅವರು ಹೇಳಿದ್ದಾರೆ. ಹಿಂದೆಲ್ಲಾ ಸತೀಶ್ ಎಂದರೆ, ಆತ ಮಂಡ್ಯದ ಹುಡುಗ ಎಂದು ಬ್ರಾಂಡ್ ಆಗಿಬಿಟ್ಟಿದ್ದರು. ಆದರೆ, 'ರಾಕೆಟ್' ಬಂದ ಮೇಲೆ, ಸತೀಶ್ ಹಳ್ಳಿ ಹುಡುಗನ ಪಾತ್ರ ಬಿಟ್ಟು, ಬೇರೆ ಪಾತ್ರ ಮಾಡುವುದಕ್ಕೂ ಪರವಾಗಿಲ್ಲ ಅನ್ನುವ ಇಮೇಜ್ ನ್ನು ನನಗೆ ರಾಕೆಟ್ ಸಿನಿಮಾ ತಂದುಕೊಟ್ಟಿದೆ ಅಂತಾ ಅವರು ಹೇಳಿದ್ದಾರೆ.
 
ಹಾಗಾಗಿ ರಾಕೆಟ್ ಸಿನಿಮಾ ನನ್ನ ಕೆರಿಯರ್‌ಗೆ ಪ್ಲಸ್ ಆಗಿದೆಯೇ ಹೊರತು, ಅದು ನನಗೆ ಯಾವುದೇ ರೀತಿಯಲ್ಲೂ ತೊಂದರೆ ಮಾಡಿಲ್ಲ. ಹಾಗಾಗಿ ಈ ಸಿನಿಮಾ ನನಗೆ ಅತ್ಯಂತ ಮುಖ್ಯವಾದದ್ದು. ಸಿನಿಮಾದಿಂದಾಗಿ ನಾನು ಸೋತಿದ್ದೇನೆ ಅಂತಾ ನನಗೆ ಯಾವತ್ತೂ ಅನ್ನಿಸಿಲ್ಲ ಅಂತಾ ಅವರು ಹೇಳಿಕೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ