ತಮ್ಮನ ಬಗ್ಗೆ ಐರಾ ಯಶ್ ಹೇಳಿಕೊಂಡಿದ್ದು ಹೀಗೆ!

ಗುರುವಾರ, 31 ಅಕ್ಟೋಬರ್ 2019 (10:19 IST)
ಬೆಂಗಳೂರು: ತಮ್ಮ ಜೀವನದ ಎಲ್ಲಾ ವಿಚಾರಗಳನ್ನೂ ಸ್ಪೆಷಲ್ ಆಗಿಯೇ ಹಂಚಿಕೊಳ್ಳುವ ರಾಕಿಂಗ್ ಸ್ಟಾರ್ ಯಶ್ ದಂಪತಿ ತಮಗೆ ಎರಡನೇ ಮಗುವಾದ ಬಗ್ಗೆಯೂ ವಿಶೇಷವಾಗಿ ಅಭಿಮಾನಿಗಳೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.


ಐರಾ ಯಶ್ ಕರೆ ಮಾಡುವಂತೆ ವಿಶೇಷವಾಗಿ ಪುತ್ರನ ಆಗಮನ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಲ್ಲದೆ ತಮಗೆ ಹಾರೈಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ ಯಶ್.

ಮೊದಲಿಗೆ ಐರಾ ತನ್ನ ಮುದ್ದಾದ ಧ್ವನಿಯಲ್ಲಿ ಮಾತನಾಡಿದರೆ ಬಳಿಕ ಯಶ್ ಆಕೆ ಹೇಳಿದ್ದರ ಅರ್ಥವೇನೆಂದು ವಿವರಿಸಿದ್ದಾರೆ. ಬಳಿಕ ನಾನೀಗ ಸದ್ಯಕ್ಕೆ ನನ್ನ ಮಕ್ಕಳೊಂದಿಗೆ ಬ್ಯುಸಿ. ತಾಯಿ ಮಗು ಇಬ್ಬರೂ ಚೆನ್ನಾಗಿದ್ದಾರೆ. ಹರಸಿದ ಎಲ್ಲರಿಗೂ ಧನ್ಯವಾದ. ಮತ್ತೆ ಸಿಗ್ತೀನಿ ಎಂದು ಕರೆ ಕಟ್ ಮಾಡಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ