ರಾಕಿಂಗ್ ಸ್ಟಾರ್ ಯಶ್ ದಾಖಲೆಯ ಕಟೌಟ್: ಹಿಂದೆ ಯಾರಿಗೆಲ್ಲಾ ಇತ್ತು ಈ ಯೋಗ?!

ಮಂಗಳವಾರ, 7 ಜನವರಿ 2020 (09:15 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ನಿಮಿತ್ತ ಅಭಿಮಾನಿಗಳು ನಂದಿ ಲಿಂಕ್ ಗ್ರೌಂಡ್ ನಲ್ಲಿ ಭಾರೀ ಸೆಲೆಬ್ರೇಷನ್ ಗೆ ಸಿದ್ಧತೆ ನಡೆಸಿದ್ದಾರೆ.


ಯಶ್ ಅವರ ಬೃಹತ್ ಕಟೌಟ್ ತಲೆಯೆತ್ತಲಿದೆ. 216 ಅಡಿಗಳ ಬೃಹತ್ ಕಟೌಟ್ ಮೇಲೇಳಲಿದೆ. ಒಂದು ದಿನ ಗಾಂಧಿ ನಗರದಲ್ಲಿ ನನ್ನದೂ ಕಟೌಟ್ ಇರಬೇಕೆಂದು ಕನಸು ಕಂಡಿದ್ದ ಯಶ್ ಗೆ ಇಂದು ಇದುವರೆಗೆ ಭಾರತೀಯ ಸಿನಿಮಾ ರಂಗದಲ್ಲಿ ಯಾರಿಗೂ ಇರದಷ್ಟು ದೊಡ್ಡ ಕಟೌಟ್ ಸಿಗುತ್ತಿರುವ ಖುಷಿ.

ಇದಕ್ಕೂ ಮೊದಲು ತಮಿಳು ನಟ ಸೂರ್ಯ ಅವರದ್ದೇ ಬೃಹತ್ ಕಟೌಟ್ ಎಂಬ ದಾಖಲೆ ಮಾಡಿತ್ತು. ಸೂರ್ಯ ಕಟೌಟ್ 215 ಫೀಟ್ ಎತ್ತರದ್ದಾಗಿತ್ತು. ಅವರ ಹೊರತಾಗಿ ತಮಿಳು ನಟ ಅಜಿತ್ ಅವರ 190 ಅಡಿ ಎತ್ತರದ ಕಟೌಟ್ ಮೂರನೇ ಸ್ಥಾನದಲ್ಲಿದೆ. ವಿಶೇಷವೆಂದರೆ ಇವರ ಕಟೌಟ್ ಗಳೆಲ್ಲಾ ಮೇಲೇರಿದ್ದು ಅವರವರ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ. ಆದರೆ ಯಶ್ ಗೆ ಮಾತ್ರ ಅಭಿಮಾನಿಗಳು ಬರ್ತ್ ಡೇ ನಿಮಿತ್ತ ಕಟೌಟ್ ಹಾಕಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ