ಪತ್ನಿ, ಮಕ್ಕಳಿಗಾಗಿ ಐಸೋಲೇಟ್ ಆದ ರಾಕಿಂಗ್ ಸ್ಟಾರ್ ಯಶ್

ಗುರುವಾರ, 24 ಡಿಸೆಂಬರ್ 2020 (10:32 IST)
ಬೆಂಗಳೂರು: ಕೆಜಿಎಫ್ 2 ಚಿತ್ರೀಕರಣ ಮುಗಿಸಿ ಹೈದಾರಾಬಾದ್ ನಿಂದ ತವರಿಗೆ ಮರಳಿರುವ ರಾಕಿಂಗ್ ಸ್ಟಾರ್ ಯಶ್ ಇದೀಗ ಐಸೋಲೇಟ್ ಆಗಿದ್ದಾರೆ.


ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿ ಭಾಗಿಯಾದ ಬಳಿಕ ಮುನ್ನೆಚ್ಚರಿಕೆಯ ಕ್ರಮವಾಗಿ ಅವರು ಪತ್ನಿ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರಿಂದ ಕೆಲವು ದಿನಗಳ ಮಟ್ಟಿಗೆ ದೂರವಾಗಿ ಪ್ರತ್ಯೇಕ ವಾಸ ಮಾಡಲಿದ್ದಾರೆ. ಕೊರೋನಾ ಎರಡನೆಯ ಅಲೆ ಭೀತಿ ಜೋರಾಗಿರುವುದರಿಂದ ಯಶ್ ಈ ರೀತಿ ಮಾಡಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಸಹಜವಾಗಿಯೇ ಸಾಕಷ್ಟು ಜನರೊಂದಿಗೆ ಬೆರೆಯಬೇಕಾಗಿತ್ತು. ಹೀಗಾಗಿ ಮನೆಯಲ್ಲಿರುವ ಪುಟಾಣಿ ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗದಂತೆ ಯಶ್ ಪ್ರತ್ಯೇಕ ವಾಸ ಮಾಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ