ರಾಕಿ ಭಾಯ್ ಯಶ್ ಹೇರ್ ಸ್ಟೈಲ್ ಗೆ ಹೊಸ ರೂಪ
ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದ ವೇಳೆ ಯಶ್ ತಮ್ಮ ಕೂದಲಿಗೆ ಖ್ಯಾತ ಹೇರ್ ಸ್ಟೈಲಿಶ್ ಅಲೀಂ ಹಕೀಂ ಬಳಿ ಹೊಸ ರೂಪ ನೀಡಿದ್ದಾರೆ. ಉದ್ದನೆಯ ಕೂದಲಿಗೆ ಕಲರಿಂಗ್ ಮಾಡಿಸಿಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ಗಳು, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಧೋನಿ ಸೇರಿದಂತೆ ಖ್ಯಾತ ನಾಮರಿಗೆ ಹೇರ್ ಸ್ಟೈಲ್ ಮಾಡುವ ಹಕೀಂ ಬಳಿ ಯಶ್ ತಮ್ಮ ಕೂದಲಿಗೆ ಹೊಸ ವಿನ್ಯಾಸ ಮಾಡಿಸಿದ್ದಾರೆ. ಆ ವಿಡಿಯೋಗಳು ಈಗ ವೈರಲ್ ಆಗಿವೆ.