ದುನಿಯಾ ವಿಜಿ ಜೊತೆ ಸ್ಟಾರ್ ವಾರ್ ನೋ ಚಾನ್ಸ್ ಎಂದ ಕಿಚ್ಚ ಸುದೀಪ್
ಸಲಗ ಸಿನಿಮಾಗೆ ಕ್ಲ್ಯಾಪ್ ಮಾಡಿದ್ದವನು ನಾನು. ಈಗ ಆ ಸಿನಿಮಾಗೆ ಕೆಟ್ಟದಾಗಲಿ ಎಂದು ಹೇಗೆ ಬಯಸಲಿ? ಚಿತ್ರರಂಗದಲ್ಲಿರುವವರೆಲ್ಲಾ ಅಣ್ಣ ತಮ್ಮಂದಿರಂತೆ. ಕೊವಿಡ್ ಕಾಲದಲ್ಲಿ ಎಲ್ಲರಿಗೂ ಕಷ್ಟವಾಗಿತ್ತು. ಈಗ ಸರಿ ಹೋಗುತ್ತದೆ ಎನ್ನುವಾಗ ಬೇರೊಬ್ಬರ ಕುರಿತಾಗಿ ಕೆಟ್ಟ ಮಾತನಾಡುವ ಪುರುಸೊತ್ತು ಯಾರಿಗೂ ಇಲ್ಲ. ಚಿತ್ರರಂಗ ಎಂದರೆ ಒಂದು ರೋಡ್ ನಂತೆ. ಇಲ್ಲಿ ಎಲ್ಲಾ ರೀತಿಯ ಕಾರ್ ಗಳು, ಸೈಕಲ್ ಗಳು ಓಡಾಡುತ್ತವೆ. ಹಾಗಂತ ರಸ್ತೆ ಯಾರೋ ಒಬ್ಬರ ಸೊತ್ತಲ್ಲ. ಇಲ್ಲಿ ಎಲ್ಲರೂ ಒಂದೇ ಎಂದು ಸುದೀಪ್ ಹೇಳಿದ್ದಾರೆ.