ಕೆಜಿಎಫ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಮಾಡಲಿರುವ ಸಿನಿಮಾ ಯಾವುದು ಗೊತ್ತಾ?

ಮಂಗಳವಾರ, 28 ಏಪ್ರಿಲ್ 2020 (10:31 IST)
ಬೆಂಗಳೂರು: ಲಾಕ್ ಡೌನ್ ಇಲ್ಲದೇ ಹೋಗಿದ್ದರೆ ಇಷ್ಟೊತ್ತಿಗಾಗಲೇ ಕೆಜಿಎಫ್ 2 ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಬೇಕಿತ್ತು. ಆದರೆ ಇದೀಗ ಲಾಕ್ ಡೌನ್ ಮುಗಿಯದೇ ಚಿತ್ರದ ಕೆಲಸಗಳು ಅರ್ಧಕ್ಕೇ ನಿಂತಿವೆ.


ಈ ನಡುವೆ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾವೂ ಬಹುಭಾಷೆ ಸಿನಿಮಾವಾಗಲಿದೆ ಎಂಬ ಸುದ್ದಿ ಕೇಳಿಬಂದಿದೆ. ಕೆಜಿಎಫ್ 2 ಸಿನಿಮಾ ಬಳಿಕ ಯಶ್ ಮತ್ತೊಂದು ಅದ್ಧೂರಿ ವೆಚ್ಚದ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಈ ಚಿತ್ರದಲ್ಲಿ ಯಶ್ ಗೆ ನಾಯಕಿಯಾಗಿ ಮಿಲ್ಕಿ ಬ್ಯೂಟಿ ತಮನ್ನಾ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹರಡಿದೆ. ಆದರೆ ಯಶ್ ಕಡೆಯಿಂದ ಇನ್ನೂ ಕನ್ ಫರ್ಮ್ ಆಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ