ಶ್ರೀಲಂಕಾದಲ್ಲಿ ಬ್ಯಾಚುಲರ್ ಪಾರ್ಟಿ ಆಯೋಜಿಸಿದ ಯಶ್ ಇದೀಗ ಮದುವೆಗೆ ರೆಡಿ

ಮಂಗಳವಾರ, 6 ಡಿಸೆಂಬರ್ 2016 (10:00 IST)
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ರನ್ನು ವರಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ತಮ್ಮ ಸ್ನೇಹಿತರೊಂದಿಗೆ ಶ್ರೀಲಂಕಾದಲ್ಲಿ ಬ್ಯಾಚ್ಯುಲರ್ ಪಾರ್ಟಿ ಮಾಡಿ ಬಂದಿದ್ದಾರೆ. ಇದೀಗ ಮದುವೆ ಶಾಸ್ತ್ರಗಳಿಗೆ ರೆಡಿಯಾಗುತ್ತಿದ್ದಾರೆ.

ಮದುವೆಯ ಬ್ಯುಸಿ ಶೆಡ್ಯೂಲ್ ನ ನಡುವೆಯೂ ತಮ್ಮ ಬ್ರಹ್ಮಚಾರಿ ಜೀವನದ ಕೊನೆಯ ದಿನವನ್ನು ಸ್ನೇಹಿತರೊಂದಿಗೆ ವಿದೇಶಕ್ಕೆ ಹೋಗಿ ಆಚರಿಸಿ ಬಂದಿದ್ದಾರೆ. ನಿನ್ನೆ ಯಶ್ ಮತ್ತು ರಾಧಿಕಾ ಮನೆಯಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿದೆ.

ನಿನ್ನೆ ಚಪ್ಪರ ಪೂಜೆ ನೆರವೇರಿಸಿದ ಯಶ್, ಅರಶಿನ ಶಾಸ್ತ್ರ, ಗೋಪೂಜೆಯಲ್ಲಿ ಮನೆಯವರ ಜತೆ ಪಾಲ್ಗೊಂಡರು. ರಾಧಿಕಾ ಪಂಡಿತ್ ಮನೆಯಲ್ಲೂ ಕೂಡಾ ಅರಶಿನ ಶಾಸ್ತ್ರ ನೆರವೇರಿದೆ. ಇಂದು ಕುಟುಂಬದವರ ಜತೆ ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಯಶ್ ಮತ್ತು ರಾಧಿಕಾ ರೊಮ್ಯಾಂಟಿಕ್ ಹಾಡುಗಳಿಗೆ ನೃತ್ಯ ಮಾಡುತ್ತಿದ್ದರೆ, ಅವರ ಕುಟುಂಬದವರೂ ನೃತ್ಯ ಮಾಡಲಿದ್ದಾರಂತೆ. ಕೊರಿಯಾಗ್ರಫರ್ ಮುರಳಿ ನೃತ್ಯ ಸಂಯೋಜಿಸಿದ್ದಾರೆ.

ಮೂರು ದಿನಗಳ ಕಾಲ ನಡೆಯಲಿರುವ ಮದುವೆಗಾಗಿ ಅರಮನೆ ಮೈದಾನದಲ್ಲಿ ಕಲಾ ನಿರ್ದೇಶಕ ಅರುಣ್ ಸಾಗರ್ ಬೇಲೂರು-ಹಳೇಬೀಡು ಹೋಲುವ ಸೆಟ್ ಹಾಕಿದ್ದಾರೆ. ವಧೂವರರ ವಸ್ತ್ರ ವಿನ್ಯಾಸವನ್ನು ಮನೀಶ್ ಮತ್ತು ಸಬ್ಯಸಾಚಿ ಮಾಡಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ