ಮಗಳ ಪುಟಾಣಿ ಕೈ-ಕಾಲುಗಳನ್ನು ಫ್ರೇಮ್ ನೊಳಗೆ ನೋಡಿ ಖುಷಿಯಾದ ಯಶ್-ರಾಧಿಕಾ ದಂಪತಿ

ಗುರುವಾರ, 22 ಆಗಸ್ಟ್ 2019 (10:13 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮುದ್ದು ಮಗಳು ಐರಾಳ ಬಾಲ್ಯದ ಪ್ರತಿಯೊಂದು ಕ್ಷಣಗಳನ್ನೂ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ತಮ್ಮ ಮುದ್ದು ಮಗುವಿನ ಪುಟಾಣಿ ಕೈಗಳನ್ನು ಜೀವನ ಪರ್ಯಂತ ನೋಡಲು ಯಶ್ ದಂಪತಿ ಹೊಸ ಪ್ಲ್ಯಾನ್ ಮಾಡಿದ್ದಾರೆ.


ತಮ್ಮ ಮಗಳು ಐರಾಳ ಪುಟಾಣಿ ಕಾಲು ಮತ್ತು ಕೈಗಳ ಪ್ರತಿಕೃತಿಯನ್ನು ಸಾವಯವ ಪದಾರ್ಥಗಳನ್ನು ಬಳಸಿ ಮೇಕಪ್ ಕಲಾವಿದ ಪ್ರಶಾಂತ್ ಬಳಿ ಕಲಾಕೃತಿಯೊಂದನ್ನು ಮಾಡಿಸಿಕೊಂಡಿದ್ದಾರೆ. ಇದನ್ನು ಫ್ರೇಮ್ ನೊಳಗೆ ಹಾಕಿ ಅದನ್ನು ಯಾವತ್ತಿಗೂ ನೆನಪಾಗಿ ಇಟ್ಟುಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ.

ಈ ಕಲಾಕೃತಿಯನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಯಶ್ ದಂಪತಿ ಇದರ ಬಗ್ಗೆ ಖುಷಿಯಿಂದಲೇ ಮಾತನಾಡಿಕೊಂಡಿದ್ದಾರೆ. ಕಲಾಕೃತಿಯನ್ನು ಮಾಡಿಕೊಟ್ಟ ಪ್ರಶಾಂತ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ತಮ್ಮ ತಾಯ್ತನದ ಪ್ರತೀ ಹೆಜ್ಜೆಯನ್ನು ಹಸಿರಾಗಿಟ್ಟುಕೊಳ್ಳಬೇಕೆಂಬುದು ನಮ್ಮ ಬಯಕೆ ಎಂದು ರಾಧಿಕಾ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ, ದೊಡ್ಡವಳಾದ ಮೇಲೆ ಐರಾ ಕೂಡಾ ಈ ಕಲಾಕೃತಿಯನ್ನು ನೋಡಿ ನನ್ನ ಕೈ, ಕಾಲು ಹೇಗಿದ್ದವು ಎಂದು ಆಶ್ಚರ್ಯಪಟ್ಟುಕೊಳ್ಳಬೇಕು. ಪ್ರಶಾಂತ್ ತುಂಬಾ ಕಷ್ಟಪಟ್ಟು ಇದನ್ನು ಮಾಡಿದ್ದಾರೆ. ಅವರಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ