ರಾಕಿಂಗ್ ಸ್ಟಾರ್ ಯಶ್ ತಮಿಳು ಮಾತಾಡುವುದನ್ನು ನೋಡಿ ಅಭಿಮಾನಿಗಳು ಏನಂದ್ರು ಗೊತ್ತಾ?

ಗುರುವಾರ, 13 ಡಿಸೆಂಬರ್ 2018 (09:50 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟ ರಾಕಿಂಗ್ ಸ್ಟಾರ್ ಯಶ್ ಈಗ ತಮಿಳುನಾಡು ಕಡೆ ತಮಿಳಿನಲ್ಲಿ ಪ್ರಚಾರ ಮಾಡುವುದನ್ನು ನೋಡಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.


ತಮಿಳುನಾಡಿನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮತ್ತು ನಿನ್ನೆಯಷ್ಟೇ ಅಲ್ಲಿನ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಯಶ್ ಪಕ್ಕಾ ತಮಿಳಿನಲ್ಲಿ ಮಾತನಾಡಿದರು. ಯಾವ ನೆಲದಲ್ಲಿ ನಿಂತಿದ್ದೇನೋ ಆ ನೆಲದ ಭಾಷೆಗೆ, ಸಂಸ್ಕೃತಿಗೆ ಗೌರವ ಕೊಡುವುದು ನನ್ನ ಕರ್ತವ್ಯ. ಅದಕ್ಕೆ ತಮಿಳಿನಲ್ಲೇ ಮಾತನಾಡುತ್ತೇನೆ ಎಂದು ಯಶ್ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

ಇದನ್ನೆಲ್ಲಾ ನೋಡಿ ಅಭಿಮಾನಿಗಳು ಯಶ್ ಭಾಷಾ ಪ್ರೇಮವನ್ನು ಕೊಂಡಾಡಿದ್ದಾರೆ. ಬಾಸ್ ನಿಮಗೆ ತಮಿಳು ಇಷ್ಟು ಚೆನ್ನಾಗಿ ಬರುತ್ತಾ? ತಮಿಳಿನಲ್ಲಿ ಚೆನ್ನಾಗಿ ಭಾಷಣ ಮಾಡಿದಿರಿ ಎಂದು ಹೊಗಳಿದ್ದಾರೆ. ಅಷ್ಟೇ ಅಲ್ಲ, ಕೆಲವು ತಮಿಳು ಸಿನಿ ಪ್ರಿಯರೂ ನಿಮ್ಮ ಸಿನಿಮಾಗೆ ಇಲ್ಲಿ 500 ಕೋಟಿ ಗಳಿಕೆ ಗ್ಯಾರಂಟಿ ಎಂದಿದ್ದಾರೆ. ಅಂದ ಹಾಗೆ ಕೆಜಿಎಫ್ ರಿಲೀಸ್ ಗೆ ಇನ್ನು ಕೇವಲ 4 ದಿನ ಬಾಕಿಯಿದ್ದು, ಅಭಿಮಾನಿಗಳು ಆನ್ ಲೈನ್ ಬುಕಿಂಗ್ ಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ