ಕೋಲಾರ ನಿರ್ದೇಶಕ ಮಹೇಶ್ ಕುಮಾರ್ ವಿರುದ್ಧ ರೌಡಿ ತಂಗಂ ತಾಯಿ ದೂರು

ಶುಕ್ರವಾರ, 19 ಸೆಪ್ಟಂಬರ್ 2014 (12:00 IST)
"ಕೋಲಾರ" ಚಿತ್ರ ನಿರ್ದೇಶಕ ಮಹೇಶ್ ಕುಮಾರ್  ವಿರುದ್ಧ ರೌಡಿ ತಂಗಂ ತಾಯಿ ಪೌಳಿ ಪೊಲೀಸರಿಗೆ ದೂರು ನೀಡಿದ್ದಾರೆ. ತಮಗೆ ನಿರ್ದೇಶಕ ಮಹೇಶ್ ಕುಮಾರ್ 25 ಲಕ್ಷ ರೂ. ಹಣ ನೀಡುವುದಾಗಿ ಭರವಸೆ ನೀಡಿ ವಂಚಿಸಿದ್ದಾರೆ ಎಂದು ಪೌಳಿ ದೂರಿನಲ್ಲಿ ತಿಳಿಸಿದ್ದಾರೆ.

ರೌಡಿಸಂನಿಂದ ಹೆಸರುವಾಸಿಯಾದ ತಂಗಂ ಜೀವನಾಧಾರಿತ ಚಿತ್ರೀಕರಣ ಮಾಡುವುದಕ್ಕಾಗಿ ತಂಗಂ ಕುಟುಂಬದ ಅನುಮತಿ ಕೇಳುವುದಕ್ಕಾಗಿ ಮಹೇಶ್ ಕುಮಾರ್ ತೆರಳಿದ್ದಾಗ ತಂಗಂ ಅವರ ಚಿತ್ರ ನಿರ್ಮಿಸುವುದಕ್ಕೆ 25 ಲಕ್ಷ ರೂ. ಹಣ ನೀಡುವುದಾಗಿ ಭರವಸೆ ನೀಡಿ, ಒಂದೂವರೆ ಲಕ್ಷ ರೂ. ಮುಂಗಡವಾಗಿ ಪಡೆದಿದ್ದರು.

ಮಹೇಶ್ ಕುಮಾರ್ ಬಳಿ ಉಳಿದ ಹಣವನ್ನು ಕೇಳಲು ಪೌಳಿ ಹೋಗಿದ್ದಾಗ ಅವರ ಮೇಲೆ ಮಹೇಶ್ ಕುಮಾರ್ ಹಲ್ಲೆಗೆ ಮುಂದಾಗಿದ್ದಾರೆ ಎಂದು ಪೌಳಿ ದೂರಿನಲ್ಲಿ ತಿಳಿಸಿದ್ದಾರೆ. ಲೂಸ್ ಮಾದ ಈ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ