ತ್ರಿಬಲ್ ಆರ್ ಸಿನಿಮಾ ರಿಲೀಸ್ ಗೆ ಎರಡು ದಿನಾಂಕ
ಸದ್ಯಕ್ಕೆ ಸಿನಿಮಾ ಮಂದಿರಗಳಲ್ಲಿ ಶೇ.50 ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶವಿದೆ. ಶೇ.100 ರಷ್ಟು ಆಸನ ಭರ್ತಿಗೆ ಯಾವಾಗ ಅವಕಾಶ ಸಿಗುತ್ತದೋ ಆಗ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಹೀಗಾಗಿ ಮಾರ್ಚ್ 18 ಮತ್ತು ಏಪ್ರಿಲ್ 28 ಎಂದು ಎರಡು ದಿನಾಂಕವನ್ನು ಘೋಷಿಸಲಾಗಿದೆ. ಒಂದು ವೇಳೆ ಮಾರ್ಚ್ ನಲ್ಲಿಯೇ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಆಸನ ಭರ್ತಿಗೆ ಅವಕಾಶ ಸಿಕ್ಕರೆ 18 ರಂದೇ ಚಿತ್ರ ಬಿಡುಗಡೆಯಾಗಲಿದೆ.