ರಚಿತಾ ರಾಂ ಸೂಪರ್ ಮಚ್ಚಿ ಸೋಲಿಗೆ ಕಲ್ಯಾಣ್ ದೇವ್ ವಿಚ್ಛೇದನ ವದಂತಿ ಕಾರಣ?
ಕಲ್ಯಾಣ್ ದೇವ್ ಪತ್ನಿ, ಚಿರಂಜೀವಿ ಪುತ್ರಿ ಶ್ರೀಜಾ ಜೊತೆಗಿನ ಸಂಬಂಧ ಹಳಸಿದೆ. ಎಂಬ ರೂಮರ್ ಗಳಿವೆ. ಇಬ್ಬರೂ ವಿಚ್ಛೇದನಕ್ಕೊಳಗಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದರಿಂದಾಗಿಯೇ ಕಲ್ಯಾಣ್ ದೇವ್ ನಾಯಕರಾಗಿದ್ದ ಸೂಪರ್ ಮಚ್ಚಿ ಸಿನಿಮಾವನ್ನು ಚಿರು ಕುಟುಂಬ ಬೆಂಬಲಿಸಿಲ್ಲ. ಇದೇ ಕಾರಣಕ್ಕೆ ಚಿತ್ರ ಸೋತಿತು ಎನ್ನಲಾಗಿದೆ.
ಈ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಗೂ ಮೊದಲು ಒಟಿಟಿ ಫ್ಲ್ಯಾಟ್ ಫಾರಂ ಒಂದು ನೇರವಾಗಿ ಬಿಡುಗಡೆ ಮಾಡಲು 5-6 ಕೋಟಿ ರೂ. ಆಫರ್ ನೀಡಿತ್ತಂತೆ. ಆದರೆ ಅದನ್ನು ಆಗ ಚಿತ್ರತಂಡ ಒಪ್ಪಿಕೊಂಡಿರಲಿಲ್ಲ. ಆದರೆ ಈಗ ಥಿಯೇಟರ್ ನಲ್ಲಿ ತೋಪೆದ್ದ ಸಿನಿಮಾ ಕೊಳ್ಳಲು ಒಟಿಟಿಯೂ ಮುಂದೆ ಬರುತ್ತಿಲ್ಲ. ಹೀಗಾಗಿ ಕಲ್ಯಾಣ್ ದೇವ್ ಸಿನಿಮಾ ತಂಡ ದಿಕ್ಕೆಟ್ಟು ಕೂತಿದೆಯಂತೆ.