ಚಿರಂಜೀವಿ ಸರ್ಜಾ ರುದ್ರತಾಂಡವ ಟ್ರೈಲರ್ ಬಿಡುಗಡೆ

ಬುಧವಾರ, 25 ಫೆಬ್ರವರಿ 2015 (10:11 IST)
ಇತ್ತೀಚಿಗೆ ಗುರು ದೇಶಪಾಂಡೆ ಅವರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ರುದ್ರತಾಂಡವ ಚಿತ್ರದ ಟ್ರೈಲರ್ ಬಿಡುಗಡೆ ಆಯ್ತು. ಆ ಟ್ರೈಲರ್ ನ್ನು ದಕ್ಷಿಣ ಭಾರತ ಪ್ರಸಿದ್ಧ ನಟ ಅರ್ಜುನ್ ಸರ್ಜಾ ಅವರು ಬಿಡುಗಡೆ ಮಾಡಿದರು. ಆ ಚಿತ್ರದಲ್ಲಿ ಅರ್ಜುನ್ ಸೋದರಳಿಯ ಚಿರಂಜೀವಿ ಸರ್ಜಾ ಹಾಗೂ ಮುದ್ದಾದ ನಟಿ ರಾಧಿಕ ಪಂಡಿತ್ ಅಭಿನಯಿಸಿದ್ದಾರೆ. ರವಿಶಂಕರ್ ಅವರು ಖಳನಟರಾಗಿದ್ದಾರೆ. ಚಿತ್ರದಲ್ಲಿ ಕೃಷ್ಣ, ಗಿರೀಶ್ ಕಾರ್ನಾಡ್ ಮತ್ತು ಚಿಕ್ಕಣ್ಣ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. 
ಈ ಚಿತ್ರ ಫೆಬ್ರವರಿ 27 ರಂದು ಬಿಡುಗಡೆ ಆಗಲಿದೆ. ಟ್ರೈಲರ್ ಬಿಡುಗಡೆ ಮಾಡಿದ ಬಳಿಕ ಅರ್ಜುನ್ ರುದ್ರತಾಂಡವ ಉತ್ತಮ ಚಿತ್ರವಾಗಿದೆ, ಒಳ್ಳೆಯ ಫಲಿತಾಂಶ ನೀಡುವಂತಹ ಅಂಶಗಳನ್ನು ಹೊಂದಿದೆ ಎಂದು ಹೇಳಿದರು. ಈ ಟ್ರೈಲರ್‌‌ನಲ್ಲಿ ಚಿರಂಜೀವಿ ಸರ್ಜಾ ಮತ್ತು ಅವರ ಸಹೋದರ ಧ್ರುವ ಸರ್ಜಾ ಸಹಿತ ಭಾಗವಹಿಸಿದ್ದರು. ಈಗಾಗಲೇ ಟ್ರೈಲರ್ಗೆ ಉತ್ತಮ ಪ್ರತಿಕ್ರಿಯೆಗಳು ದೊರಕುತ್ತಿವೆ. ಹಾಡುಗಳು ಸಹಿತ ಹೆಚ್ಚು ಇಷ್ಟ ಆಗಿವೆ.

ವೆಬ್ದುನಿಯಾವನ್ನು ಓದಿ