ಚಿರಂಜೀವಿ ಸರ್ಜಾ ಅಭಿನಯದ ರುದ್ರತಾಂಡವ ಇಂದು ಬಿಡುಗಡೆ

ಶುಕ್ರವಾರ, 27 ಫೆಬ್ರವರಿ 2015 (09:42 IST)
ಇಂದು ಚಿರಂಜೀವಿ ಸರ್ಜಾ ಹಾಗೂ ರಾಧಿಕ ಕುಮಾರಸ್ವಾಮಿ ಅವರ ಅಭಿನಯದ ಗುರು ದೇಶಪಾಂಡೆ ನಿರ್ದೇಶನದ ಚಿತ್ರ ರುದ್ರತಾಂಡವ ಬಿಡುಗಡೆ ಆಗುತ್ತಿದೆ. ಕರ್ನಾಟಕದಾದ್ಯಂತ ಬಿಡುಗಡೆ ಆಗುತ್ತಿರುವ ಈ ಚಿತ್ರವೂ ತಮಿಳು  ಚಿತ್ರದ ರೀಮೇಕ್ ಆಗಿದೆ. ರುದ್ರತಾಂಡವ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಅದರಲ್ಲಿ ಮುಖ್ಯವಾಗಿ ಈ ಚಿತ್ರ ತಮಿಳು ಸೂಪರ್ ಹಿಟ್ ಚಿತ್ರ  ಪಾಂಡಿಯನಾಡು ರೀಮೇಕ್ ಆಗಿದೆ. ಮೂಲ ಚಿತ್ರದಲ್ಲಿ ವಿಶಾಲ್ ಅವರು ಅಭಿನಯಿಸಿದ್ದರು. 
ಮತ್ತೊಂದು ವಿಶೇಷ ಸಂಗತಿ ಎಂದರೆ ಗುರು ದೇಶಪಾಂಡೆ ಕನ್ನಡ ಮೇರು ಕಲಾವಿದರಾದ ಚಿರಂಜೀವಿ ಸರ್ಜಾ, ರಾಧಿಕ ಕುಮಾರ ಸ್ವಾಮಿ, ಗಿರೀಶ್ ಕಾರ್ನಾಡ್, ಕುಮಾರ್ ಗೋವಿಂದ್, ರವಿಶಂಕರ್ ರವರನ್ನು ಒಂದೇ ಕಡೆ ಸೇರಿಸಿ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. 
 
ಅಷ್ಟೇ ಅಲ್ಲದೆ ರಮ್ಯ ನಂಬೀಸನ್ ಅವರು ಇದರಲ್ಲಿ ಹಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡು,ಖಳನಟ  ರವಿಶಂಕರ್ ಅವರಿಗೆ ವಿಶೇಷ ಟ್ರೈಲರ್ ಹೀಗೆ ಹತ್ತು ಹಲವಾರು ಸಂಗತಿಗಳಿವೆ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಾಗೇಶ್ ಮತ್ತು ವಿನೋದ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಜಗದೀಶ್ ವಾಲಿ ಛಾಯಾಗ್ರಹಣ ಚಿತ್ರಕ್ಕಿದೆ.

ವೆಬ್ದುನಿಯಾವನ್ನು ಓದಿ