ಒಂದೇ ಸಿನಿಮಾದಲ್ಲಿ ನಾಲ್ಕು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಸಾಧುಕೋಕಿಲ

ಶನಿವಾರ, 13 ಫೆಬ್ರವರಿ 2016 (12:36 IST)
ಕನ್ನಡದ ಪ್ರತಿಭಾವಂತ ನಟ ನಿರ್ದೇಶಕ, ಸಂಗೀತ ನಿರ್ದೇಶಕ ಹಾಗೇ ಗಾಯಕರಲ್ಲಿ ಒಬ್ಬರು ಸಾಧು ಕೋಕಿಲ. ಇಷ್ಚು ದಿನ ಸಾಧು ಕೋಕಿಲ ಒಂದೊಂದು ಸಿನಿಮಾದಲ್ಲಿ ಒಂದೊಂದು ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.ಒಂದರಲ್ಲಿ ನಟನಾದ್ರೆ ಇನ್ನೊಂದು ಸಿನಿಮಾದಲ್ಲಿ ಗಾಯಕ, ಸಂಗೀತ ನಿರ್ದೇಶಕ, ನಿರ್ದೇಶಕ ಹೀಗೆ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಒಂದೇ ಸಿನಿಮಾದಲ್ಲಿ ಸಾಧು ಈ ಎಲ್ಲಾ ಪಾತ್ರಗಳನ್ನು ಮಾಡುತ್ತಿದ್ದಾರೆ.
 
  ಸಾಧು ಕೋಕಿಲ ಸದ್ಯ ಭಲೇ ಜೋಡಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ಸುಮಂತ್ ಶೈಲೇಂದ್ರ ಅಭಿನಯಿಸುತ್ತಿರುವ ಈ ಸಿನಿಮಾದಲ್ಲಿ ನಿರ್ದೇಶನದ ಜೊತೆಗೆ ಸಾಧು ಇನ್ನೂ ಮೂರು ಜವಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಹೌದು.. ಸಾಧು ನಿರ್ದೇಶನದ ಜೊತೆಗೆ ಈ ಸಿನಿಮಾದಲ್ಲಿ ಸಾಧು ಸಂಗೀತ ನಿರ್ದೇಶಕ, ಗಾಯಕ ಹಾಗೇ ನಟನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಈವರೆಗೂ ಸಾಧು ಒಂದೇ ಸಿನಿಮಾದಲ್ಲಿ ಈ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿಲ್ಲವಂತೆ. ಇದೇ ಮೊದಲ ಬಾರಿಗೆ ಸಾಧು ಈ ರೀತಿ ಕಾಣಿಸಿಕೊಳ್ಳುತ್ತಿದ್ದಾರಂತೆ.
 
ಇನ್ನು ಈ ಸಿನಿಮಾವನ್ನು ಸಿನಿಮಾದ ನಾಯಕ ಸುಮಂತ್ ಅವರ ತಂದೆ ಶೈಲೇಂದ್ರ ಬಾಬು ಅವರು ನಿರ್ಮಾಣ ಮಾಡುತ್ತಿದ್ದಾರೆ. ಸಾಧು ಕೋಕಿಲ ಬಗ್ಗೆ ಶೈಲೇಂದ್ರ ಅವರಿಗೂ ವಿಶೇಷ ಅಭಿಮಾನವಂತೆ. ಸಾಧು ಅವರ ಎಲ್ಲಾ ವಿಚಾರಗಳಲ್ಲೂ ಪರಿಣಿತರು.ಅವರು ಸಕಲ ಕಲಾ ವಲ್ಲಭ. ಅಲ್ಲದೇ ಇಂತಹ ಪ್ರತಿಭಾವಂತ ನನ್ನ ಮಗನ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ ಅನ್ನೋದು ನನಗೆ ತುಂಬಾ ಸಂತೋಷದ ವಿಚಾರ ಅಂತಾ ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ