ರಜನೀಕಾಂತ್ 2.0 ದಾಖಲೆ ಮುರಿದ ಸಾಹೋ

ಮಂಗಳವಾರ, 3 ಸೆಪ್ಟಂಬರ್ 2019 (10:10 IST)
ಹೈದರಾಬಾದ್: ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈಗ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ 2.0 ದಾಖಲೆಯನ್ನೂ ಮುರಿದು ಮುನ್ನುಗ್ಗುತ್ತಿದೆ.


ರಜನೀಕಾಂತ್ ಅಭಿನಯದ 2.0 ಮೊದಲ ವೀಕೆಂಡ್ ನಲ್ಲಿ ಎಲ್ಲಾ ಭಾಷೆಗಳಲ್ಲಿ ಸೇರಿದಂತೆ 155 ಕೋಟಿ ರೂ. ಗಳಿಕೆ ಮಾಡಿತ್ತು. ಇದೀಗ ಸಾಹೋ ಮೊದಲ ವಾರದ ವೀಕೆಂಡ್ ಕಲೆಕ್ಷನ್ 190 ಕೋಟಿ ರೂ. ಮಾಡಿದ್ದು, ಈ ಮೂಲಕ 2.0 ದಾಖಲೆಯನ್ನು ಮುರಿದಿದೆ.

ಈಗಾಗಲೇ ಹಿಂದಿಯಲ್ಲೇ ಸಾಹೋ 79 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಕೇವಲ ಹಿಂದಿ ಭಾಷೆಯಲ್ಲೇ ಈ ಸಿನಿಮಾ 100 ಕೋಟಿ ರೂ. ಗಳಿಕೆ ಮಾಡುವ ಹಂತದಲ್ಲಿದೆ. ಇದು ನಿಜಕ್ಕೂ ವಿಶೇಷವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ