ಸಲಾರ್ ಬಿಡುಗಡೆ ಮುಂದೂಡಿಕೆ: ಹೊಸ ಡೇಟ್ ಯಾವಾಗ?
ಚಿತ್ರ ಸೆಪ್ಟೆಂಬರ್ 28 ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಈ ಮೊದಲು ಚಿತ್ರತಂಡ ಘೋಷಿಸಿತ್ತು. ಇದೇ ವಾರ ಟ್ರೈಲರ್ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಇದೀಗ ತಾಂತ್ರಿಕ ಕಾರಣಗಳಿಂದ ಸಲಾರ್ ಬಿಡುಗಡೆ ದಿನಾಂಕ ಮುಂದೂಡಲಾಗುತ್ತಿದ್ದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವ ಸಾಧ್ಯತೆಯಿದೆ.