ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಭಾಸ್ ನಾಯಕರಾಗಿರುವ ಬಹುನಿರೀಕ್ಷಿತ ಸಲಾರ್ ಸಿನಿಮಾ ಬಿಡುಗಡೆಯಾಗಿದೆ. ಮೊದಲ ಶೋಗೇ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ.
ಮೊದಲ ಒಂದಷ್ಟು ಕ್ಷಣಗಳು ಸೈಲೆಂಟ್ ಆಗಿರುವ ದೇವ (ಪ್ರಭಾಸ್) ಬಳಿಕ ವಯಲೆಂಟ್ ಆಗುತ್ತಾನೆ. ಸೈಲೆಂಟ್ ಆಗಿದ್ದಾಗಲೂ ವಯಲೆಂಟ್ ಆಗಿದ್ದಾಗಲೂ ಪ್ರಭಾಸ್ ನಟನೆಗೆ ಪೂರ್ಣ ಅಂಕ ನೀಡಲೇಬೇಕು. ಉಗ್ರಂ ಸಿನಿಮಾ ನೋಡಿದ್ದ ಪ್ರೇಕ್ಷಕರಿಗೆ ಇದೂ ಆ ಸಿನಿಮಾದ ಮತ್ತೊಂದು ವರ್ಷನ್ ಎನಿಸಬಹುದು. ಸ್ನೇಹಿತ ವರದನ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟನೆಯ ಬಗ್ಗೆಯೂ ಎರಡು ಮಾತಿಲ್ಲ.
ಇಡೀ ಸಿನಿಮಾ ತುಂಬಾ ಭರ್ಜರಿ, ಮೈನವಿರೇಳಿಸುವ ಆಕ್ಷನ್ ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಪಕ್ಕಾ ಪ್ರಶಾಂತ್ ನೀಲ್ ಶೈಲಿಯ ಸಿನಿಮಾ. ಉಗ್ರಂ, ಕೆಜಿಎಫ್ ಸಿನಿಮಾ ನೋಡಿದವರಿಗೆ ಅಂತಹದ್ದೇ ಮತ್ತೊಂದು ರೋಮಾಂಚಕಾರಿ ಅನುಭವ ಕೊಡುತ್ತದೆ.
ಕೆಲವರು ಉಗ್ರಂನ ಮತ್ತೊಂದು ರೂಪ, ಮತ್ತದೇ ಹಳೇ ಕತೆಯನ್ನೇ ಹೊಸ ಬಾಟಲಿಯಲ್ಲಿ ನೀಡಲಾಗಿದೆ ಎಂದು ಬೇಸರ ಹೊರಹಾಕಿದವರೂ ಇದ್ದಾರೆ. ಹಿಂಸಾತ್ಮಕ ಅಂಶಗಳು ಜಾಸ್ತಿಯಾಯಿತು ಎಂದು ಮೂಗು ಮುರಿದವರೂ ಇದ್ದಾರೆ. ಆದರೆ ಆಕ್ಷನ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಸಿನಿಮಾ ಇಷ್ಟವಾಗಬಹುದು.