ನಾರ್ಗಾಜುನ್ ಅವರಿಗೆ ಶುಭ ಹಾರೈಸಿದ ಸಲ್ಮಾನ್ ಖಾನ್

ಮಂಗಳವಾರ, 1 ಸೆಪ್ಟಂಬರ್ 2015 (09:41 IST)
ಸಲ್ಮಾನ್ ಖಾನ್ ಅಂದ್ರೇ ಕೇವಲ ಬಾಲಿವುಡ್ ಮಾತ್ರವಲ್ಲ, ಇಡೀ ದಕ್ಷಿಣಭಾರತ ಸಿನಿತಾರೆಯರಿಗೆ ಸಲ್ಲು ಅಂದ್ರೆ ವಿಶೇಷ ಅಭಿಮಾನಿ ಪ್ರೀತಿ. ಸಲ್ಮಾನ್ ಖಾನ್ ಕೂಡ ಹಾಗೇ ಪ್ರತಿ ಕಲಾವಿದರನ್ನು ಅಷ್ಟೇ ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ.
ಇತ್ತೀಚೆಗಷ್ಟೇ ತೆಲುಗು ನಟ ನಾಗಾರ್ಜುನ್ 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು. ಇದೇ ವೇಳೆ ಸಲ್ಲು ಟ್ವೀಟ್ ಮಾಡೋ ಮೂಲಕ ಅಕ್ಕಿನೇನಿ ನಾಗಾರ್ಜುನ್ ಅವರಿಗೆ ಶುಭ ಹಾರೈಸಿದ್ರು. ಜೊತೆಗೆ ನಾಗಾರ್ಜುನ್ ಪುತ್ರ ಅಖಿಲ್ ಅವರ ಚೊಚ್ಚಲ ಸಿನಿಮಾ ಅಖಿಲ್ ಗೂ ಕೂಡ ಸಲ್ಲು ಶುಭ ಹಾರೈಸಿದ್ರು. ಇದ್ಕಕೆಂ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ ನಾಗಾರ್ಜುನ್ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಲ್ಲು ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
 
ನಾಗಾರ್ಜುನ್ ಪುತ್ರ ಅಖಿಲ್ ಇದೇ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಸಾಯಿಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಿತಿನ್ ರೆಡ್ಡಿಎಂಬವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ